ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

Public TV
1 Min Read

ಬೆಂಗಳೂರು: ಜೂನಿಯರ್ ಚಿರು ಅಮ್ಮನ ಕಿರುಬೆರಳು ಹಿಡಿದಿರುವ ಮುದ್ದಾದ ಫೋಟೋವನ್ನ ಮೇಘನಾ ರಾಜ್ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಲಿನಲ್ಲಿ ಅದ್ದಿದಂತೆ ಕಾಣುವ ಪುಟ್ಟ ಕಂದನ ಕೋಮಲ ಕರಗಳಿಗೆ ನೋಡುಗರ ದೃಷ್ಟಿ ತಾಕುವಂತಿದೆ.

ಮಹಿಳೆಗೆ ಅಮ್ಮನ ಪದವಿಯೇ ಅತ್ಯುನ್ನತ ಸ್ಥಾನ ಅನ್ನೋ ಮಾತಿದೆ. ಮಗುವಿನ ಆಗಮನದ ಜೊತೆಯಲ್ಲಿ ಅಮ್ಮನ ಜನ್ಮವೂ ಆಗುತ್ತೆ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವನ್ನ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅದು ಕಿರುಬೆರಳು ಹಿಡಿದು, ಅಮ್ಮ ಎಂದು ಕರೆಯುವರೆಗೂ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಲ್ಲಿರುತ್ತಾಳೆ. ಕಂದನ ಪ್ರತಿ ಬೆಳವಣಿಗೆ ಹಂತಗಳು ತಾಯಿಯನ್ನ ಪುಳುಕವನ್ನುಂಟು ಮಾಡುತ್ತೇವೆ.

 

View this post on Instagram

 

A post shared by Meghana Raj Sarja (@megsraj)

ಹಳದಿ ಮತ್ತು ಕಪ್ಪು ಬಣ್ಣದ ಶ್ವೆಟರ್ ತೊಟ್ಟು ಕೈಗೊಂದು ಕೆಂಪು ಲೇಸ್ ಕಟ್ಟಿಕೊಂಡ ಜೂನಿಯರ್ ಚಿರು, ತಾಯಿ ಮೇಘಾನ ಕಿರುಬೆರಳನ್ನ ತನ್ನ ಇಡೀ ಕೈಯಿಂದ ಹಿಡಿಯುವ ಪ್ರಯತ್ನದಲ್ಲಿದ್ದಾನೆ. ಇದೊಂದು ಮಿರಾಕಲ್. ನನ್ನ ಪುಟ್ಟ ಕಂದ ತನ್ನ ಪುಷ್ಪ ದಳದಂತಹ ಕೈಗಳಿಂದ ನನ್ನನ್ನ ಬೆರಳು ಹಿಡಿಯಲು ಪಯತ್ನಿಸುತ್ತಿದೆ. ಇದು ದೇವರು ನೀಡಿದ ಅಮೂಲ್ಯ ಉಡುಗೊರೆ ಎಂದು ಮೇಘನಾ ರಾಜ್ ತಾಯಿಯ ಅನುಭವವನ್ನ ಕೆಲ ಸಾಲುಗಳಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *