ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ರಾಜೀವ್

Public TV
2 Min Read

ಬಿಗ್ಬಾಸ್ ಮನೆಯಿಂದ ಆಚೆ ಬಂದಮೇಲೆ ಮೊದಲ ಬಾರಿಗೆ ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್‍ಬಾಸ್‍ನಿಂದ ಆಚೆ ಬಂದಾಗ ಇಷ್ಟು ಬೇಸರವಾಗಿರಲಿಲ್ಲ. ಬಿಗ್‍ಬಾಸ್ ಅರ್ಧಕ್ಕೆ ನಿಂತು ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಇನ್‍ಸ್ಟಾಗ್ರಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರಿಗೆ ಕನ್ನಡಿಗನಾದ ರಾಜೀವನ ನಮಸ್ಕಾರ, ನಾನು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಆದರೆ ಇವತ್ತು ಬಿಗ್ ಬಾಸ್ ಕಾರ್ಯಕ್ರಮವೇ ನಿಂತುಹೋಗಿರುವುದು ತುಂಬಾ ಬೇಜಾರ್ ಆಗುತ್ತಿದೆ. ಎಲ್ಲೋ ಒಂದು ಕಡೆ ನನ್ನ ಪಾಡಿಗೆ ನಾನಿದ್ದೆ. ನನ್ನನ್ನು ಸ್ವಾಗತಿಸಿ, ಗೌರವಿಸಿ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇವತ್ತು ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಅಭಿಮಾನಕ್ಕೆ ಒಳಗಾಗುವಂತೆ ಮಾಡಿದ್ದಾರೆ, ಇದಕ್ಕೆ ನಾನೆಂದಿಗೂ ಆಭಾರಿ ಎಂದು ರಾಜೀವ್ ಹೇಳಿದ್ದಾರೆ.

 

View this post on Instagram

 

A post shared by Rajeev Hanu (@rajeevhanuofficial)

ಅದೆಷ್ಟೋ ಪ್ರತಿಭೆಗಳನ್ನು ಹುಡುಕಿ, ಗುರುತಿಸಿ, ಸಾಧನೆಯ ಹಾದಿಯಲ್ಲಿ ಮೆರೆಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಕೂರಿಸಿ, ಅಚ್ಚಳಿಯದ ಉತ್ತುಂಗಕ್ಕೆ ಏರಿಸಿ, ಸಂಭ್ರಮಪಡುವ ಬಿಗ್ ಬಾಸ್‍ನಂತಹ ಕಾರ್ಯಕ್ರಮದಲ್ಲಿ, ನನ್ನ ಹೆಜ್ಜೆಯ ಗುರುತುಗಳು ಸಹ ಆ ಮನೆಯಲ್ಲಿ ಓಡಾಡಿರುವುದನ್ನು ನೆನೆದು ನಾನು ಕಾಲಕಾಲಕ್ಕೂ ಹೆಮ್ಮೆಪಡುತ್ತೇನೆ. ನನ್ನನ್ನು ತಮ್ಮನಿಗಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿನಯ ಚಕ್ರವರ್ತಿ ಕನ್ನಡಗರ ಆಸ್ತಿ ಕಿಚ್ಚ ಸುದೀಪ್ ಅವರಿಗೆ ನನ್ನ ಹೃದಯಾಳದ ವಂದನೆಗಳು. ನನ್ನನ್ನು ಹ0ಬಲದಿಂದ ಸದಾ ಬೆ0ಬಲಿಸುವ ಪರಮ್ ಸರ್ ಅವರಿಗೆ ಪ್ರೀತಿಯ ಅಪ್ಪುಗೆ, ಕಲರ್ಸ್ ವಾಹಿನಿಯ ಮೂಲಕ ಮನೆ ಮನೆಯಲ್ಲೂ ಮನೆ ಮಾತಾಗಲು ಕಾರಣವಾದ ಪ್ರತಿಯೊಬ್ಬ ಕಾರ್ಮಿಕ ಹಾಗೂ ತಂತ್ರಜ್ಞರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಮನೆಯಲ್ಲಿ ಇದ್ದ ಪ್ರತಿಯೊಂದು ದಿನವು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡು ಬ0ದಿದ್ದಾರೆ. ಮನೆಯಿಂದ ನನ್ನನ್ನು ಹೊರಗೆ ಕಳಿಸುವಾಗಲು ಅವರ ಔಪಚಾರಿಕತೆಯ ಬೀಳ್ಕೊಡುಗೆಯನ್ನು ಕೊಟ್ಟು ಗೌರವಯುತವಾಗಿ ನನ್ನನ್ನು ಕಳಿಸಿಕೊಡುವ ಉದ್ದೇಶ ಅವರದ್ದಾಗಿತ್ತು. ಆದರೆ ಸುದೀಪ್ ಸರ್ ಅವರ ಅನುಪಸ್ಥಿತಿ ಹಾಗೂ ನನ್ನ ಮನಸ್ಥಿತಿ ಎರಡು ಸದ್ದಿಲ್ಲದೇ ನನ್ನನ್ನು ಸ್ತಬ್ಧನಾಗುವಂತೆ ಮಾಡಿತ್ತು. ಮೊದಲಿಗೆ ನನ್ನ ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಮನೆಯಿಂದ ಹೊರಗೆ ಬಂದಮೇಲೆ, ಯಾರ ಕಣ್ಣಿಗೂ ಕಾಣಿಸದೇ, ಯಾವ ಚಾನಲ್‍ಗೂ ಸಿಗದೆ, ಸಂದರ್ಶನ ಕೊಡದೇ ಇದ್ದ ಒಂದೇ ಕಾರಣ, ಕೊರೊನಾದಿಂದ ಇಡೀ ದೇಶವೇ ಕಣ್ಣೀರಿನಲ್ಲಿ ತತ್ತರಿಸುತ್ತಿರುವಾಗ ನಾನು ಮಾತ್ರ ಹೇಗೆ ನೆಮ್ಮದಿಯಾಗಿರಲು ಸಾಧ್ಯ? ಪರಿಸ್ಥಿತಿ ಎಲ್ಲವೂ ಸರಿಯಾಗಲಿ, ನನ್ನನ್ನು ನೆಚ್ಚಿಕೊ0ಡ, ಮೆಚ್ಚಿಕೊಂಡ ಪ್ರತಿಯೊಬ್ಬ ಅಭಿಮಾನಿಯನ್ನು ಮುಖಾಮುಖಿ ಭೇಟಿಯಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜನರಿಗಾಗಿ ನಾನು, ಜನರಿಂದಲೇ ನಾನು, ಜನರೇ ನನ್ನ ಸರ್ವಸ್ವ, ಜನರೇ ನನ್ನ ಮೊದಲ ಆದ್ಯತೆ. ನಿಮ್ಮ ಮನೆಯವನಂತೆ ನನ್ನನ್ನು ಪ್ರೀತಿಸಿದ್ದೀರಿ ನಿಮ್ಮ ಪ್ರೀತಿಗೆ ನಾನು ಎಂದಿಗೂ ಚಿರಋಣಿ. ನಿಮ್ಮ ಮನದಲ್ಲಿ ನಾನು, ನನ್ನ ಉಸಿರುಸಿರಲು ನೀವು… ಸದಾ ಪ್ರೀತಿಯಿ0ದ ನಿಮ್ಮ ರಾಜೀವ ಎಂದು ಅವರು ಪೋಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *