ಅಭಿಮಾನಿಗಳಿಂದ ಆದಿಪುರುಷನ ಸ್ಟೈಲಿಶ್ ಲುಕ್ ಔಟ್

Public TV
2 Min Read

ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಮಧ್ಯೆ ಅಭಿಮಾನಿಯೊಬ್ಬರು ಪ್ರಭಾಸ್ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನ ಗೆಲ್ಲುತ್ತಿದೆ. ಅಲ್ಲದೆ ಪ್ರಭಾಸ್ ಫೋಟೋದಲ್ಲಿ ಸ್ಪೋಟ್ರ್ಸ್ ಕೂಲಿಂಗ್ ಗ್ಲಾಸ್ ಧರಿಸಿ, ಮೀಸೆ ಬಿಟ್ಟುಕೊಂಡು ಸಖತ್ ಸ್ಟೈಲಿಶ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ನಿರ್ದೇಶಕ ಓಂ ರೌತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅಂದಹಾಗೇ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಪ್ರಭಾಸ್ ಸ್ಟೈಲಿಶ್ ಲುಕ್‍ಗೆ ಫಿದಾ ಆಗಿದ್ದಾರೆ ಹಾಗೂ ಪ್ರಭಾಸ್ ಮುಂದಿನ ಸಿನಿಮಾಕ್ಕೆ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಪ್ರಭಾಸ್ ದೇವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ನಟ ಪ್ರಭಾಸ್ ಅಭಿನಯಿಸುತ್ತಿರುವ ಆದಿಪುರುಷ ಸಿನಿಮಾ ಭಾರತೀಯ ಮಹಾಕಾವ್ಯದ ರೂಪಾಂತರವಾಗಿದ್ದು, ಕೆಟ್ಟದರ ವಿರುದ್ಧ ಒಳ್ಳೆಯದು ವಿಜಯ ಸಾಧಿಸುತ್ತದೆ ಎಂಬ ಕಥೆಯುಳ್ಳದಾಗಿದೆ. ಹಿಂದೂ ಪುರಾಣದಲ್ಲಿ ರಾಮನನ್ನು ಆದಿಪುರುಷ ಎಂದು ಕರೆಯಲಾಗುತ್ತದೆ. ಹಾಗೆಯೇ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೈಫ್ ಲಂಕೇಶದ ರಾಕ್ಷಸ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಕೃತಿ ಸನನ್ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಈ ಸಿನಿಮಾಕ್ಕೆ ಬರೋಬ್ಬರಿ 400 ಕೋಟಿ ರೂ. ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ವಿಎಫ್‍ಎಕ್ಸ್‍ಗಾಗಿ ಭಾರೀ ಮೊತ್ತ ಖರ್ಚು ಮಾಡಲಾಗಿದೆ. ಆದಿಪುರುಷ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಿಸಲಾಗುತ್ತಿದ್ದು, ಅವತಾರ್ ಮತ್ತು ಸ್ಟಾರ್ ವಾರ್ಸ್‍ನ ಸಿನಿಮಾಗಳಲ್ಲಿ ಕೆಲಸ ಮಾಡಿದವರು ಈ ಸಿನಿಮಾದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ಸಿನಿಮಾ ಕುರಿತಂತೆ ಮಾತನಾಡಿದ ಪ್ರಭಾಸ್, ಪ್ರತಿಯೊಂದು ಪಾತ್ರವು ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಈ ರೀತಿಯ ಪಾತ್ರದಲ್ಲಿ ಅಭಿನಯಿಸುವಾಗ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮಹಾಕಾವ್ಯದ ಈ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದು, ಬಹಳ ಉತ್ಸುಹಕಾನಾಗಿದ್ದೇನೆ. ಖಂಡಿತವಾಗಿಯೂ ನಮ್ಮ ದೇಶದ ಯುವಕರು ಸಿನಿಮಾ ಕುರಿತಂತೆ ಪ್ರೀತಿ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *