ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಮಗ ಅಪ್ಪನ ಡಾನ್ಸ್ ನೋಡುತ್ತಾ ಕುಳಿತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

ಈ ಕೀಬೋರ್ಡ್ ಎಂದರೆ ಅವನಿಗೆ ತುಂಬ ಕುತೂಹಲ. ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತ ಎಂದರೆ ಸರಿಯಾದ ಬಟನ್ ಪ್ರೆಸ್ ಮಾಡಿದ. ಆಗ ಅಪ್ಪನ ಸಿನಿಮಾದ ಫೇವರೇಟ್ ಸಾಂಗ್ ಬಂತು. ಮತ್ತೆ ಬೇಕು ಎಂದ. ನಾನು ಖುಷಿಯಿಂದ ಪದೇಪದೇ ಪ್ಲೇ ಮಾಡಿದೆ. ಹ್ಯಾಪಿ ಫಾದರ್ಸ್ ಡೇ ಎಂದು ಮೇಘನಾ ರಾಜ್ ಬರೆದುಕೊಂಡು ಮಗನ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ವರಗಳನ್ನು ಕೊಡುವ ದೇವರಾಗಿ ಇದ್ರಿ: ಮಾಲಾಶ್ರೀ

ಚಿರು ಲ್ಯಾಪ್‍ಟಾಪ್‍ನಲ್ಲಿ ಸಿನಿಮಾ ಹಾಡುಗಳನ್ನು ಎಂಜಾಯ್ ಮಾಡುತ್ತಿದ್ದಾನೆ. ಅದರಲ್ಲೂ ಅಪ್ಪ ಚಿರಂಜೀವಿ ಸರ್ಜಾ ನಟನೆಯ ಹಾಡುಗಳೆಂದರೆ ಅವನಿಗೆ ಸಖತ್ ಇಷ್ಟ. ಪದೇಪದೇ ಅದೇ ಹಾಡುಗಳನ್ನು ರಿಪೀಟ್ ಮೋಡ್‍ನಲ್ಲಿ ನೋಡುತ್ತಿದ್ದಾನೆ. ಈ ವೀಡಿಯೋವನ್ನು ಮೇಘನಾ ರಾಜ್ ಈಗ ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇನ್ನು, ಅವರ ಪುತ್ರ ಜ್ಯೂ. ಚಿರು ಕೂಡ ಸ್ಟಾರ್ ಆಗಿದ್ದಾನೆ. ಆತನ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಪ್ಪಂದಿರ ದಿನಾಚರಣೆ ಸಲುವಾಗಿ ಚಿರಂಜೀವಿ ಸರ್ಜಾ ಪುತ್ರನ ಹೊಸ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ಚಿರು ಹೃದಯಾಘಾತದಿಂದ ನಿಧನರಾಗಿ ಒಂದು ವರ್ಷ ಕಳೆದಿದೆ. ಮಗನ ಆರೈಕೆ ಮಾಡುತ್ತಾ ಮೇಘನಾ ಸಮಯ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮೇಘನಾ ರಾಜ್ ಅಭಿಮಾನಿಗಳ ಬಳಗದಲ್ಲಿ ಜ್ಯೂನಿಯರ್ ಚಿರುನ ಈ ವೀಡಿಯೋ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *