ರಾಯಚೂರು: ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಮುದಗಲ್ ನಲ್ಲಿ ನಡೆದಿದೆ.
ಗದ್ದೆಪ್ಪ ಕುಣೆಕೆಲ್ಲೂರು(28), ಅಂದಪ್ಪ ಕುಣೆಕೆಲ್ಲೂರು(34) ಮೃತ ದುರ್ದೈವಿಗಳು. ಅಪಘಾತದಿಂದ ಬೈಕಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಕಾರು ಕೂಡ ಜಖಂ ಆಗಿದೆ.
ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.