ಅನ್‍ಲಾಕ್ ಸ್ಟೇಜ್ -3ಕ್ಕೆ ಕ್ಷಣಗಣನೆ – ಇಂದು ಸಂಜೆ ಸಿಎಂ ಬಿಎಸ್‍ವೈ ಮಹತ್ವದ ಸಭೆ

Public TV
2 Min Read

– ಷರತ್ತುಗಳನ್ನು ಹೇರಿ ಓಪನ್‍ಗೆ ಅವಕಾಶ ಕೊಡುತ್ತಾ ಸರ್ಕಾರ?

ಬೆಂಗಳೂರು: ರಾಜ್ಯದಲ್ಲಿ 3ನೇ ಹಂತದ ಅನ್‍ಲಾಕ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಸೋಮವಾರದಿಂದ ಏನೆಲ್ಲಾ ರಿಲೀಫ್ ನೀಡಬೇಕು ಎಂಬುದುರ ಬಗ್ಗೆ ಇಂದು ನಡೆಯಲಿರುವ ಸಿಎಂ ಸಭೆಯಲ್ಲಿ ನಿರ್ಧಾರವಾಗಲಿದೆ.

ಪಾಸಿಟಿವಿಟಿ ರೇಟ್ ನೋಡಿಕೊಂಡು ಎಲ್ಲಾ ಜಿಲ್ಲೆಗಳನ್ನು ಅನ್‍ಲಾಕ್ ಮಾಡುವ ಸಂಭವ ಇದೆ. ಮಾಲ್‍ಗಳ ಜೊತೆಗೆ ಚಿತ್ರಮಂದಿರಗಳೂ ಹಾಗೂ ಮಾರುಕಟ್ಟೆಗಳನ್ನೂ ಓಪನ್ ಮಾಡುವಂತೆ ಬಿಬಿಎಂಪಿ ಪ್ರಸ್ತಾವನೆ ಮುಂದಿಟ್ಟಿದೆ. ಮಾಲ್ ಹಾಗೂ ದೇವಸ್ಥಾನಗಳು ಓಪನ್ ಆಗುವ ಸುದ್ದಿ ಹರಡಿರೋದ್ರಿಂದ ಈಗಿನಿಂದಲೇ ಶುಚಿತ್ವ ಕಾರ್ಯ ನಡೆದಿದೆ. ಆದ್ರೆ ಆರೋಗ್ಯ ಮಂತ್ರಿಗಳು ಮಾತ್ರ, ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಅಂದಿದ್ದಾರೆ.

ದೇಗುಲಗಳು ಅಧಿಕೃತವಾಗಿ ಓಪನ್ ಆಗಿಲ್ಲ. ಆದ್ರೂ ಬೀದರ್ ನ  ನರಸಿಂಹ ಝರಣಾ ದೇಗುಲಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಕೊಡಗು ಲಾಕ್ ಆಗಿದ್ರೂ ಪ್ರವಾಸಿಗರು ಲಗ್ಗೆ ಇಡೋದು ನಿಂತಿಲ್ಲ. ಪ್ರವಾಸಿಗರಿದ್ದ ರೆಸಾರ್ಟ್ ಮೇಲೆ ಪೊಲೀಸ್ ರೇಡ್ ನಡೆದಿದೆ. ಕೊಡಗು ಜಿಲ್ಲೆಯನ್ನು ಕಂಪ್ಲೀಟ್ ಅನ್‍ಲಾಕ್ ಮಾಡಬಾರದು ಅಂತ ಶಾಸಕ ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ. ಹರಿಹರ ಶಾಸಕ ರಾಮಪ್ಪ ಮಗಳ ಮದ್ವೆಯಲ್ಲಿ ರೂಲ್ಸ್ ಬ್ರೇಕ್ ಆಗಿತ್ತು. ಸಾವಿರಾರು ಮಂದಿ ಪಾಲ್ಗೊಂಡಿದ್ರು. ಇದಕ್ಕೆ ಸಾಕ್ಷಿಯಾಗಿದ್ದು ಸನ್ಮಾನ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ. ಈ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿಯೇ ಇಲ್ವಂತೆ.

ಡೆಲ್ಟಾ ಪ್ಲಸ್ ಆತಂಕ:
ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹೊತ್ತಲ್ಲಿ ಡೆಲ್ಟಾ ವೈರಸ್ ಹೆಡೆ ಬಿಚ್ಚಿ ತಿಂಗಳುಗಳೇ ಕಳೆದಿವೆ. ಆದ್ರೆ ಇದನ್ನು ಮುಚ್ಚಿಡಲು ಸರ್ಕಾರ ನೋಡ್ತಾ ಎಂಬ ಪ್ರಶ್ನೆ ಎದ್ದಿದೆ. ಹೆಲ್ತ್ ಬುಲೆಟಿನ್‍ನಲ್ಲಿ ಪ್ರಕಟಿಸಲಾದ 518 ಕೇಸ್ ಪೈಕಿ 200 ಡೆಲ್ಟಾ ಕೇಸ್‍ಗಳು ಹೊಸವಲ್ಲ.. ಇದೆಲ್ಲಾ ಪತ್ತೆಯಾಗಿ ಒಂದೂವರೆ ತಿಂಗಳೇ ಕಳೆದಿವೆ ಅಂತಾ ತಜ್ಞ ವೈದ್ಯ ಡಾ.ವಿಶಾಲ್ ರಾವ್ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ನೀಡಿದ ಹೇಳಿಕೆ ಕೂಡ ಅಚ್ಚರಿ ಮೂಡಿಸುತ್ತೆ. ಕೊರೊನಾ ಕೇಸ್‍ಗಳ ಪೈಕಿ ಶೇಕಡಾ 70ರಷ್ಟು ಡೆಲ್ಟಾ ಪಾಲಿದೆ ಎಂದಿದ್ದಾರೆ. ಇದನ್ನೂ ಓದಿ: ನಾನು ಓಪನ್ ಹಾರ್ಟೆಡ್, ಸಿದ್ದರಾಮಯ್ಯ ಮಾತನಾಡಬೇಡ ಎಂದಿದ್ದಾರೆ: ಜಮೀರ್

ಡೆಲ್ಟಾ ವಿಚಾರದಲ್ಲಿ ರಾಜ್ಯಕ್ಕೆ ಮಹಾರಾಷ್ಟ್ರ, ಕೇರಳ ಕಂಟಕವಾದಂತೆ ಕಾಣ್ತಿದೆ. ನಿತ್ಯ ಸಾವಿರಾರು ಮಂದಿ ರೈಲು, ಬಸ್, ವಿಮಾನದ ಮೂಲಕ ಓಡಾಡ್ತಿದ್ದಾರೆ. ಇತ್ತ ಕೋವಿಡ್ ಟೆಸ್ಟ್ ಕೂಡ ಸರಿಯಾಗಿ ಆಗ್ತಿಲ್ಲ. ಈವರೆಗೂ ಸರಿಸುಮಾರು 100 ದೇಶಗಳಲ್ಲಿ ಡೆಲ್ಟಾ ವೈರಸ್ ಹಬ್ಬಿದ್ದು, ಹಲವು ದೇಶಗಳು ಮತ್ತೆ ಲಾಕ್ ಆಗ್ತಿವೆ. ರಷ್ಯಾದಲ್ಲಿ ಬೂಸ್ಟರ್ ಡೋಸ್ ನೀಡಲಾಗ್ತಿದೆ. ಡೆಲ್ಟಾ ಎದುರಿಸಲು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಸಮರ್ಥವಾಗಿದೆ ಅಂತಾ ಕಂಪನಿ ಹೇಳಿಕೊಂಡಿದೆ. ಮೊದಲ ಡೋಸ್ ತೆಗೆದುಕೊಂಡ 29 ದಿನಗಳಲ್ಲೇ ಡೆಲ್ಟಾ ವೈರಸನ್ನು ನಿರ್ವೀರ್ಯ ಮಾಡುವ ಆಂಟಿಬಾಡಿ ಉತ್ಪತ್ತಿ ಆಗುತ್ತವೆ ಎಂದು ತಿಳಿಸಿದೆ. ಇದನ್ನೂ ಓದಿ: ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

Share This Article
Leave a Comment

Leave a Reply

Your email address will not be published. Required fields are marked *