ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿರ್ಮಾಣದ ‘ಬುಲ್ ಬುಲ್’ ಸಿನಿಮಾಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಿವ್ಯೂ ನೀಡಿದ್ದು, ಸಿನಿಮಾ ತನಗೆ ಇಷ್ಟವಾಗಿದೆ. ಯಾರು ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಅನ್ವಿತಾ ದತ್ ನಿರ್ದೇಶನದ ವೆಬ್ ಸಿನಿಮಾ ‘ಬುಲ್ ಬುಲ್’ ನಿರ್ಮಾಪಕರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ರಾಹುಲ್ ಬೋಸ್, ತೃಪ್ತಿ ದಿಮಿ, ಅವಿನಾಶ್ ತಿವಾರಿ, ಪರಂಬ್ರತ ಚಟ್ಟೋಪಾಧ್ಯಾಯ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Loved this moving story told in a brilliant way. Bhai behen on fire @AnushkaSharma #KarneshSharma ????❤️. Out now, please don’t miss it guys. @OfficialCSFilms pic.twitter.com/qQqNKQnWJn
— Virat Kohli (@imVkohli) June 24, 2020
ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಬುಲ್ ಬುಲ್’ ಸಿನಿಮಾದ ಟ್ರೈಲರ್ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಬುಧವಾರ ನೆಟ್‍ಫ್ಲಿಕ್ಸ್‍ನಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾವನ್ನು ನೋಡಿದ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರು ಹೃದಯವನ್ನ ಕಲಕುವ ಕಥೆಯೊಂದಿದ್ದು, ಇಂತಹ ಕಥೆಯನ್ನು ತೆರೆಗೆ ಅಳವಡಿಸಿರುವ ವಿಧಾನ ಇಷ್ಟ ಆಯ್ತು. ಅಣ್ಣ, ತಂಗಿ ಫುಲ್ ಫೈರ್ ಆಗಿದ್ದಾರೆ (ಅನುಷ್ಕಾ, ಸಹೋದರ ಕರ್ಣೇಶ್). ಸಿನಿಮಾ ಬಿಡುಗಡೆಯಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
32 ವರ್ಷದ ಅನುಷ್ಕಾ ಶರ್ಮಾ ಜೀರೋ ಸಿನಿಮಾದಲ್ಲಿ ಅಂತಿಮವಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆ ಬಳಿಕ ‘ಅಂಗ್ರೇಜಿ ಮಿಡಿಯಂ’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿರುವ ಅನುಷ್ಕಾ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಅನುಷ್ಕಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಬೇಕಿದೆ.