ಅನಂತೇಶ್ವರ, ಕೊಲ್ಲೂರಿನಲ್ಲಿ ಭಕ್ತರ ದಂಡು – ಕಠಿಣ ನಿಯಮ ಜಾರಿಗೊಳಿಸಿರುವ ದೇವಸ್ಥಾನಗಳು

Public TV
1 Min Read

ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ದೇಗುಲಗಳ ಬಾಗಿಲು ತೆಗೆದು ಭಕ್ತರಿಗೆ ದರ್ಶನಾವಕಾಶ ಮಾಡಿಕೊಡಲಾಗಿದೆ. ತುಂತುರು ಮಳೆಯ ನಡುವೆಯೇ ಭಕ್ತರು ದೇವಸ್ಥಾನಗಳತ್ತ ಧಾವಿಸಿ ಬರುತ್ತಿದ್ದಾರೆ.

ಮಹಾಮಾರಿ ಕೊರೊನಾದ ಅಟ್ಟಹಾಸ ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನ್‍ಲಾಕ್ ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರ ಆಗಿರೋದ್ರಿಂದ ಶಿವನ ದೇಗುಲ ಭಕ್ತರನ್ನು ಸೆಳೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಧಾರ್ಮಿಕ ಕೇಂದ್ರಗಳಿದ್ದು, ಭಕ್ತರು ಸುಮಾರು ಎರಡು ತಿಂಗಳ ನಂತರ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ.

ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದ್ದು, ಭಕ್ತರು ಮಳೆಯ ನಡುವೆ ದೇವರ ದರ್ಶನ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಎಂದಿನಂತೆ ಮಹಾಪೂಜೆ ನಡೆಯುತ್ತಿದ್ದು ಭಕ್ತರಿಗೆ ಸದ್ಯ ಯಾವುದೇ ಸೇವೆಗಳನ್ನು ನೀಡುವ ಅವಕಾಶ ಇಲ್ಲ. ಉಡುಪಿ ಕೃಷ್ಣ ಮಠ ಒಂದು ವಾರದ ಬಳಿಕ ಭಕ್ತರಿಗೆ ಸರಿಯುತ್ತದೆ. ದೇವರ ದರ್ಶನದ ಅವಕಾಶ ಸಿಗುತ್ತದೆ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

ಉಡುಪಿ ನಗರದಲ್ಲಿರುವ ಅನಂತೇಶ್ವರ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಸಿಕ್ಕಿತು. ದೇವಸ್ಥಾನದ ಹೊರ ಭಾಗದಲ್ಲಿ ಸಾಮಾಜಿಕ ಅಂತರದ ಸರತಿ ಸಾಲು ಸ್ಯಾನಿಟೈಸರ್ ಥರ್ಮಾಮೀಟರ್ ಗಳ ತಪಾಸಣೆ ನಡೆಸಿ ದೇಗುಲದ ಒಳಗೆ ಬಿಡಲಾಯಿತು. ಕೊಲ್ಲೂರಿನಲ್ಲಿ ಧಾರ್ಮಿಕ ಸೇವೆ ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಇದನ್ನೂ ಓದಿ: ನಟ ದುನಿಯಾ ವಿಜಯ್ ತಾಯಿ ಆರೋಗ್ಯ ಗಂಭೀರ

Share This Article
Leave a Comment

Leave a Reply

Your email address will not be published. Required fields are marked *