– ಚಾಲಕನಿಂದ ವಿಡಿಯೋ ರೆಕಾರ್ಡ್
– ವಿಷ ಸೇವಿಸಿ ಯುವತಿ ಆತ್ಮಹತ್ಯೆ
ಲಕ್ನೋ: ಅತ್ಯಾಚಾರ ಎಸಗಿದ ವಿಡಿಯೋವನ್ನು ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಕ್ಕೆ ಒತ್ತಡ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಶಹರಾನಪುರದಲ್ಲಿ ಘಟನೆ ನಡೆದಿದ್ದು, 17 ವರ್ಷದ ಯುವತಿ ತನ್ನ ಮೇಲೆ ಅತ್ಯಾಚಾರ ಆಗಿರುವುದನ್ನು ಹೇಳಲಾಗಿದೆ, ಇನ್ನೊಂದೆಡೆ ಆರೋಪಿ ವಿಡಿಯೋ ಹರಿಬಿಟ್ಟಿದ್ದರ ಭಯದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ಅತ್ಯಾಚಾರ ಎಸಗುವ ಕೃತ್ಯವನ್ನು ಆತನ ಚಾಲಕ ವಿಡಿಯೋ ಮಾಡಿಕೊಂಡಿದ್ದಾನೆ.
ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಅವಳನ್ನು ಸ್ಥಳೀಯ ಶಹರಾನಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಸಹ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ.
ಯುವತಿಯ ಸಹೋದರ ಘಟನೆ ಕುರಿತು ಮಾಹಿತಿ ನೀಡಿದ್ದು, ನೋಮನ್ ಎಂಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ನೋಮನ್ ಚಾಲಕ ರಹ್ಬರ್ ಕೃತ್ಯದ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವಿಡಿಯೋ ಇಟ್ಟುಕೊಂಡು ಆರೋಪಿಗಳು ಯುವತಿಯನ್ನು ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದಾರೆ. ಯುವತಿ ನಿರಾಕರಿಸಿದಾಗ ಆರೋಪಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದಾಗಿ ಯುವತಿ ಒತ್ತಡಕ್ಕೊಳಗಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿ ವಿಷ ಸೇವಿಸಿದ ಬಳಿಕ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್ 376(ಅತ್ಯಾಚಾರ), 306(ಅತ್ಯಾಚಾರಕ್ಕೆ ಪ್ರೇರಣೆ) ಸೇರಿದಂತೆ ಐಟಿ ಕಾಯ್ದೆಯ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಕುರಿತು ಶಹರಾನ್‍ಪುರ ಗ್ರಾಮಾಂತರ ಠಾಣೆಯ ಎಸ್‍ಪಿ ಅಶೋಕ್ ಕುಮಾರ್ ಮೀನಾ ಮಾಹಿತಿ ನೀಡಿ, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.