ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

Public TV
1 Min Read

– ಕ್ಷಣ ಕ್ಷಣಕ್ಕೂ ಆತಂಕ!

ಗಾಂಧೀನಗರ: ಗುಜರಾತಿನ ಜಮಾನಗರದಲ್ಲಿ ಸಿನಿಮಾ ಶೈಲಿಯ ಶಾಕಿಂಗ್ ವೀಡಿಯೋ ವೈರಲ್ ಆಗಿದೆ. ಒಂದು ಕಡೆ ರೈಲು ಬರುತ್ತಿದ್ರೆ, ಇತ್ತ ಓರ್ವ ವ್ಯಕ್ತಿ ಹಳಿಯಲ್ಲಿ ಸಿಲುಕಿದ್ದ ಸ್ಕೂಟಿ ತೆಗೆಯಲು ಹರಸಾಹಸ ಪಡುತ್ತಿರೋ ವೀಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ.

ಯುವಕನೋರ್ವ ತನ್ನ ಸ್ಕೂಟಿ ಜೊತೆ ರೈಲ್ವೇ ಹಳಿಯನ್ನ ಕ್ರಾಸ್ ಮಾಡುತ್ತಿದ್ದನು. ಅಷ್ಟರಲ್ಲಿಯೇ ರೈಲು ಆಗಮಿಸುತ್ತಿರೋದು ಕಾಣಿಸಿದೆ. ಯುವಕ ಸಹ ಅವಸರದಲ್ಲಿ ಹಳಿ ಕ್ರಾಸ್ ಮಾಡುವಾಗ ಸ್ಕೂಟರ್ ಅಲ್ಲಿಯೇ ಸಿಲುಕಿಕೊಂಡಿದೆ. ಯುವಕ ಹಳಿಯಿಂದ ಸ್ಕೂಟಿ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ರೆ, ದೂರದಲ್ಲಿದ್ದ ಜನರ ಎದೆ ಬಡಿತ ಪಕ್ಕದಲ್ಲಿದವರಿಗೂ ಕೇಳಿಸುತ್ತಿತ್ತು.

ಯುವಕ 100 ಮೀಟರ್ ಸಮೀಪ ಬರೋವರೆಗೂ ಸ್ಕೂಟಿ ತೆಗೆಯಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಕೂಟಿ ಅಲ್ಲಿಯೇ ಸಿಲುಕಿದ ಪರಿಣಾಮ ರೈಲು ಸಮೀಪಕ್ಕೆ ಬರುತ್ತಿದ್ದಂತೆ ಪಕ್ಕಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ರೈಲು ಸ್ಕೂಟಿಯನ್ನ ಸುಮಾರು 100 ಮೀಟರ್ ವರೆಗೂ ಎಳೆದೊಯ್ದು ನಿಂತಿದೆ. ರೈಲು ನಿಲ್ಲಿಸಿದ ಬಳಿಕ ಚಾಲಕರು ಅಪ್ಪಚ್ಚಿಯಾಗಿದ್ದ ಸ್ಕೂಟಿಯನ್ನ ತೆಗೆದಿದ್ದಾರೆ.

ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದೆ ಝಲ್ಲೆನ್ನಿಸುವ ವೀಡಿಯೋ ಹೆಚ್ಚು ಶೇರ್ ಆಗುತ್ತಿದೆ. ವಾಹನ ಸವಾರರು ಸೂಚಿತ ಮಾರ್ಗದಲ್ಲಿಯೇ ರೈಲು ಹಳಿಯನ್ನ ಕ್ರಾಸ್ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *