ಅತೃಪ್ತ ಸಭೆಗೆ ನನಗೂ ಆಹ್ವಾನ ಬಂದಿತ್ತು: ಶಾಸಕ ವೆಂಕಟರೆಡ್ಡಿ ಮುದ್ನಾಳ

Public TV
1 Min Read

ಯಾದಗಿರಿ: ಶಾಸಕ ಬಸನಗೌಡ ಪಾಟೀಲ್ ಯತಾಳ್ ನೇತೃತ್ವದಲ್ಲಿ ನಡೆದ ಸಭೆಗೆ ನನಗೂ ಆಹ್ವಾನ ಬಂದಿತ್ತು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ನನ್ನನ್ನು ಸಭೆಗೆ ಕರೆದಿದ್ದರು. ಆದರೆ ನಾನು ಸಭೆಗೆ ಹೋಗಲಿಲ್ಲ ಎಂದು ಬಿಜೆಪಿ ಅತೃಪ್ತ ಶಾಸಕರ ಸಭೆ ವಿಚಾರವಾಗಿ ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿಕೆ ನೀಡಿದ್ದಾರೆ.

ಯಾದಗಿರಿಯ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಕ್ಷೇತ್ರದ ಜನ ತತ್ತರಿಸಿದ್ದಾರೆ. ನಾವು ಈ ಸಮಯದಲ್ಲಿ ರಾಜಕೀಯ ಮಾತನಾಡದೆ ರೋಗಿಗಳನ್ನು ಗುಣಮುಖರನ್ನಾಗಿ ಮಾಡುವ ಬಗ್ಗೆ ಚಿಂತಿಸಬೇಕು. ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಮಾತು ಸರಿಯಲ್ಲ ಎಂದು ಬಿಜೆಪಿ ಅತೃಪ್ತ ಶಾಸಕರಿಗೆ ವೆಂಕಟರೆಡ್ಡಿ ಮುದ್ನಾಳ ಸಲಹೆ ನೀಡಿದರು.

ಕೊರೊನಾ ಸಮಸ್ಯೆ ಮುಗಿದ ಮೇಲೆ ಮುಖ್ಯಮಂತ್ರಿಗಳ ಬದಲಾವಣೆ, ಸಚಿವ ಸ್ಥಾನ ನೀಡುವುದು ಹಾಗೂ ರಾಜ್ಯಸಭೆ ಸದಸ್ಯರ ಆಯ್ಕೆ ವಿಚಾರದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡೋಣ. ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕೊರೊನಾ ಜೊತೆ ಅಭಿವೃದ್ಧಿ ಕಾರ್ಯ ಚಿಂತೆ ಮಾಡಬೇಕೆಂದು ಸಿಎಂ ಬಿಎಸ್‍ವೈ ಹಾಗೂ ಅತೃಪ್ತ ಶಾಸಕರಿಗೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಜನರ ಸಮಸ್ಯೆ ಕೊರೊನಾ ಕಾರಣದಿಂದ ಹೆಚ್ಚಾಗಿದೆ. ಆದ್ದರಿಂದ ನಾನು ಕ್ಷೇತ್ರದಲ್ಲೇ ಇದ್ದೇನೆ. ನನಗೆ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಇರೋ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿದ್ದೇನೆ. ಕೊರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳ ವೇಗಕ್ಕೆ ಬ್ರೇಕ್ ಬಿದ್ದಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಗಮನ ನೀಡಿ ಯೋಜನೆಗಳ ವೇಗ ಹೆಚ್ಚಿಸಬೇಕಿದೆ. ನಮ್ಮ ಗಮನ ಸಂರ್ಪೂಣವಾಗಿ ಕೊರೊನಾ ಕಡೆ ಇದೆ. ಈ ಸಂದರ್ಭದಲ್ಲಿ ಸರಿ ವಿಚಾರಗಳನ್ನು ಸರಿಯಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *