ಅಣ್ಣಾವ್ರನ್ನ ಫಾಲೋ ಮಾಡ್ತಿದ್ದಾರಾ ಯಶ್?

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ವರನಟ ಡಾ.ರಾಜ್ ಕುಮಾರ್‍ರವರು ಸಾಗುತ್ತಿದ್ದ ಹಾದಿಯನ್ನೇ ರಾಕಿಂಗ್ ಸ್ಟಾರ್ ಯಶ್ ಅನುಸರಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಗಾಂಧೀನಗರದ ಗಲ್ಲಿಯೊಳಗೆ ಇದೀಗ ಹರಿದಾಡುತ್ತಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಸದ್ಯ ಸಿನಿಮಾಕ್ಕೆ ರಾಕಿಂಗ್ ಸ್ಟಾರ್ ಯಶ್ ವಾಯ್ಸ್ ಡಬ್ಬಿಂಗ್ ನೀಡಲು ಆರಂಭಿಸಿದ್ದಾರೆ. ಇತ್ತೀಚೆಗೆ ಯಶ್ ಹಾಗೂ ಪ್ರಶಾಂತ್ ನೀಲ್ ವಾಯ್ಸ್ ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹೌದು ನಟ ಯಶ್ ಡಬ್ಬಿಂಗ್ ವಿಚಾರದಲ್ಲಿ ಡಾ.ರಾಜ್ ಕುಮಾರ್‍ರನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಸಿನಿಮಾದ ರಾಕಿ ಬಾಯ್ ಪಾತ್ರಕ್ಕೆ ವಾಯ್ಸ್ ಡಬ್ ನೀಡಲು ಯಶ್ ಆಕಾಶ್ ಸ್ಟುಡಿಯೋಗೆ ಬೆಳಗ್ಗೆ 6 ಗಂಟೆಗೆ ಹೋಗಿ 9ರವರೆಗೂ ತಮ್ಮ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರಂತೆ. ಬೆಳಗಿನ ವಾತಾವರಣದಲ್ಲಿ ಬೇಸ್ ವಾಯ್ಸ್ ಹೊರಬರುತ್ತದೆ. ಇದರಿಂದ ಧ್ವನಿ ಉತ್ತಮವಾಗಿ ಕೇಳಿಬರುತ್ತದೆ ಎಂಬ ಕಾರಣಕ್ಕೆ ಯಶ್ ಬೆಳಗಿನ ಜಾವ ಪಾತ್ರಕ್ಕೆ ವಾಯ್ಸ್ ಡಬ್ ನೀಡುತ್ತಿದ್ದಾರಂತೆ.

ಈ ಮುನ್ನ ಗಾನ ಗಂಧರ್ವ ಡಾ. ರಾಜ್ ಕುಮಾರ್ ಕೂಡ ಬೆಳಗಿನ ಜಾವವೇ ಹಾಡುಗಳ ರೆಕಾರ್ಡಿಂಗ್‍ನನ್ನು ಹೆಚ್ಚಾಗಿ ಮಾಡುತ್ತಿದ್ದರಂತೆ. ಹಾಗಾಗಿ ಇಂದಿಗೂ ಡಾ.ರಾಜ್ ಕುಮಾರ್ ಧ್ವನಿ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿದೆ ಎಂದೇ ಹೇಳಬಹುದು.

ಕೆಜಿಎಫ್- 2 ಸಿನಿಮಾದಲ್ಲಿ ಯಶ್‍ಗೆ ಜೋಡಿಯಾಗಿ ಶ್ರೀನಿಧಿ ಅಭಿನಯಿಸಿದ್ದು, ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್ ನಟ ಸಂಜಾಯ್‍ದತ್, ರವೀನಾ ಟಂಡನ್, ಪ್ರಕಾಶ್ ರೈ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಅಲ್ಲದೆ ಕೇಜಿಎಫ್-2 ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಜುಲೈ 16ರಂದು ಬಿಡುಗಡೆಗೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *