ಅಡುಗೆ ಸಹಾಯಕಿ ಜೊತೆ ಸೆಲ್ಫಿ: ಶಿಕ್ಷಕ ಅಮಾನತು

Public TV
1 Min Read

ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಶಾಲೆಗಳು ಸಂಪೂರ್ಣ ಬಾಗಿಲು ಮುಚ್ಚಿದ್ದು, ಲಾಕ್‍ಡೌನ್ ಸಡಲಿಕೆ ನಂತರ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅದೇ ಇಲ್ಲೊಂದು ಶಾಲೆ ಈಗಾಗಲೇ ಪ್ರಾರಂಭವಾಗಿದೆ. ಶಿಕ್ಷಕನೊಬ್ಬ ಅಡುಗೆ ಸಹಾಯಕಿ ಜೊತೆ ಲವ್ವಿಡವ್ವಿ ನಡೆಸುತ್ತಿದ್ದು, ಅಕೆಯ ಜೊತೆಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿ ಅಮಾನತು ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗೋಗುದ್ದಿ ಗ್ರಾಮದಲ್ಲಿ ನಡೆದಿದೆ.

ಅಮಾನತು ಆದ ಶಿಕ್ಷಕನ ಹೆಸರು ಆಂಜನೇಯ ನಾಯ್ಕ. ಗೋಗುದ್ದಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ. ಕೊರೊನಾ ಕಾರಣ ಶಾಲೆಗಳು ಬಂದ್ ಆಗಿವೆ. ಆದರೆ ಈತ ನಿತ್ಯ ಶಾಲೆಗೆ ಬಂದು ಅಡುಗೆ ಸಹಾಯಕಿಯರನ್ನು ಕರೆಸುತ್ತಿದ್ದ. ಅಲ್ಲದೇ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ವಿವಿಧ ಗ್ರೂಪ್‍ಗಳಿಗೆ ಹಾಕುತ್ತಿದ್ದ. ಅಲ್ಲದೆ ಶಾಲೆಗಳು ತೆರೆದಿದ್ದಾಗ ಈತ ಕುಡಿದು ಬರುತಿದ್ದ. ಅಲ್ಲದೇ ಮಕ್ಕಳಿಂದ ಗುಟ್ಕಾ ತರಿಸುತ್ತಿದ್ದ. ಹೀಗೆ ಹತ್ತಾರು ಕಾರಣಕ್ಕೆ ಈತನಿಂದ ಇಡೀ ಗ್ರಾಮಸ್ಥರಿಗೆ ಬೇಸರವಾಗುತ್ತಿತ್ತು. ಇದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಗ್ರಾಮಸ್ಥರು ನೇರವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಇದನ್ನೂ ಓದಿ: ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ – ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ

ಈ ಶಿಕ್ಷಕನ ಮೇಲೆ ಎರಡು ವರ್ಷದ ಹಿಂದೆ ಓರ್ವ ಮಹಿಳೆ ಈತನ ವಿರುದ್ಧ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಈ ಎಲ್ಲಾ ಕಾರಣಕ್ಕಾಗಿ ಗ್ರಾಮಸ್ಥರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಹೀಗೆ ದೂರು ನೀಡಿದ ತಕ್ಷಣವೇ ಸಚಿವವರು ಜಾಗೃತರಾಗಿ ದಾವಣಗೆರೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಅವರಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದರು. ಇದರಿಂದ ಡಿಡಿಪಿಐ ಪರಮೇಶ್ವರಪ್ಪ ನಡೆಸಿದ ತನಿಖೆಯಲ್ಲಿ ಗ್ರಾಮಸ್ಥರು ಮಾಡಿದ ಆರೋಪಗಳು ಸತ್ಯವಾಗಿದ್ದವು. ಜೊತೆಗೆ ಗ್ರಾಮದ ಬಹುತೇಕರು ಈತನ ವಿರುದ್ಧ ದೂರು ಹೇಳಿದರು. ಎಲ್ಲಾ ಸಾಕ್ಷಿಗಳನ್ನು ಆಧಾರಿಸಿ ಶಿಕ್ಷಕ ಆಂಜನೇಯ ನಾಯ್ಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *