ಅಕ್ರಮ ಸಂಬಂಧ ಶಂಕೆ- ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪಾಪಿ

Public TV
2 Min Read

– ಗುಪ್ತಾಂಗದಲ್ಲಿ ಬಿಯರ್ ಬಾಟಲ್ ಇಟ್ಟು ತಂತಿಯಿಂದ ಕಟ್ಟಿದ ಅಳಿಯ
– ಎರಡು ದಿನ ನರಳಿದ ಮಹಿಳೆ

ಜೈಪುರ್: ಅಕ್ರಮ ಸಂಬಂಧ ಅನುಮಾನದ ಹಿನ್ನೆಲೆಯಲ್ಲಿ ಮೂವರು ಮಕ್ಕಳ ತಾಯಿಯ ಮೇಲೆ ಆಕೆಯ ಅಳಿಯನೇ ಕ್ರೌರ್ಯ ಮೆರೆದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಗಳು ಅಕ್ರಮ ಸಂಬಂಧದ ಅನುಮಾನದ ಮೇಲೆ ಮಹಿಳೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಗುಪ್ತಾಂಗದಲ್ಲಿ ಬಿಯರ್ ಬಾಟಲಿಯನ್ನು ಹಾಕಿ ಅದನ್ನು ಎರಡು ದಿನಗಳ ಕಾಲ ತಂತಿಯಿಂದ ಕಟ್ಟಿದ್ದರು. ಎರಡು ದಿನಗಳ ನಂತರ ಸಂತ್ರಸ್ತೆಯನ್ನು ಆಕೆಯ ಸಹೋದರ ಆರೋಪಿಗಳಿಂದ ಬಿಡಿದಿಕೊಂಡು ಬಂದಿದ್ದಾನೆ ಎಂದು ವರದಿಯಾಗಿದೆ.

ಮಹಿಳೆಯ ಪತಿ ಔಷಧಿ ತರಲು ಬಿಕಾನೆರ್ ಗೆ ಹೋಗಿದ್ದಾಗ ಸಂತ್ರಸ್ತೆಯ ಅಳಿಯ, ಮಾವ, ಅತ್ತೆ ಸೇರಿ ಐವರು ಕೃತ್ಯ ಎಸೆಗಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಮೂರು ದಿನಗಳ ಕಾಲ ನಾಗೌರ್ ನ ಜೆಎಲ್‍ಎನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯ ಕಾರಣ ಆಕೆಯನ್ನು ಜೋಧಪುರಕ್ಕೆ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಐದು ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ.

ಆಗಿದ್ದೇನು?:
ಮಹಿಳೆಯ ಸಹೋದರನ ನೀಡಿದ ಮಾಹಿತಿ ಪ್ರಕಾರ, “ಸಹೋದರಿಯನ್ನು ಕುಚೇರಾ ಗ್ರಾಮದ ನಿವಾಸಿ ಜೊತೆಗೆ ವಿವಾಹ ಮಾಡಿಕೊಡಲಾಗಿದ್ದು, ಆಕೆಗೆ ಮೂವರು ಮಕ್ಕಳಿದ್ದಾರೆ. ಆದರೆ ಮಾರುಕಟ್ಟೆಯಿಂದ ತಂಬಾಕು ಚೀಲಗಳನ್ನು ಸಂಗ್ರಹಿಸಲು ಹಳ್ಳಿಯಿಂದ ಒಬ್ಬ ವ್ಯಕ್ತಿಯನ್ನು ಕಳುಹಿಸಿದ್ದಳು. ಇದು ಸಹೋದರಿಯ ಅಳಿಯನ ಕೋಪಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಹಲ್ಲೆಗೆ ಪ್ಲಾನ್ ರೂಪಿಸಿದ್ದರು. ಅದರಂತೆ ಜೂನ್ 18ರಂದು ಆರೋಪಿಯು ಕೆಲಸದ ನೆಪದಲ್ಲಿ ಜಮೀನಿನಲ್ಲಿದ್ದ ಸಹೋದರಿಯನ್ನು ಕರೆದಿದ್ದರು. ಆಗ ಕಬ್ಬಿಣದ ರಾಡ್‍ನಿಂದ ಹೊಡೆದು ಹಲ್ಲೆ ಮಾಡಿದ್ದರು” ಎಂದು ದೂರಿದ್ದಾರೆ.

“ವಿಕೃತ ಮನಸ್ಸಿನ ಪಾಪಿಗಳು ಅಷ್ಟಕ್ಕೆ ಬಿಡದೆ ಸಹೋದರಿಯನ್ನು ಕಬ್ಬಿಣದ ತಂತಿಯಿಂದ ಕಟ್ಟಿ ಹಾಕಿ ರಾಡ್ ಬಿಸಿ ಬರೆ ಕೊಟ್ಟಿದ್ದರು. ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಲ್ಲದೆ, ಬೀಯರ್ ಬಾಟಲ್ ಇಟ್ಟು ಕ್ರೌರ್ಯ ಮೆರೆದಿದ್ದರು. ನೋವು ಮತ್ತು ಕಿರುಕುಳದಿಂದ ಆಕೆ ಕಿರುಚಲು ಪ್ರಾರಂಭಿಸಿದಾಗ ಆರೋಪಿಗಳು ಬಟ್ಟೆಯಿಂದ ಬಾಯಿ ಮುಚ್ಚಿದ್ದರು. ಸಹೋದರಿ ಪ್ರಜ್ಞೆ ತಪ್ಪಿದ ನಂತರ ಗುಡಿಸಲಿನಲ್ಲಿ ಬಿಟ್ಟು, ಅವಳು ಸತ್ತಿದ್ದಾಳೆಂದು ಗ್ರಾಮದಲ್ಲಿ ಬಿಂಬಿಸಿದ್ದರು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.

ಮಹಿಳೆಯು ಮಾರನೆ ದಿನ ಅಂದ್ರೆ ಜೂನ್ 19ರಂದು ಪ್ರಜ್ಞೆ ಮರಳಿದ್ದಳು. ಆಗ ತನ್ನನ್ನು ಬಿಡುವಂತೆ ಆರೋಪಿಗಳಿಗೆ ಮನವಿ ಮಾಡಿಕೊಂಡಿದ್ದಳು. ನಿಮ್ಮ ಕೃತ್ಯದ ಕುರಿತು ನಾನು ಯಾರಿಗೂ ಏನನ್ನೂ ಹೇಳುವುದಿಲ್ಲ. ದಯವಿಟ್ಟು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಳು. ಆದರೆ ಆರೋಪಿಗಳು ಅವಳನ್ನು ಬಿಟ್ಟಿರಲಿಲ್ಲ.

ಆರೋಪಿಗಳು ಹೊಲದಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಮಹಿಳೆಗೆ ಚಿಕಿತ್ಸೆ ನೀಡುತ್ತಲೇ ಇದ್ದರು. ಈ ಕುರಿತು ಮಹಿಳೆಯ ಸಹೋದರನಿಗೆ ಜೂನ್ 21ರಂದು ಮಾಹಿತಿ ಸಿಕ್ಕಿತ್ತು. ತಕ್ಷಣ ತನ್ನ ಸಹೋದರಿಯನ್ನು ಕರೆದುಕೊಂಡು ಹೋಗಲು ಕುಟುಂಬದೊಂದಿಗೆ ಜಮೀನಿಗೆ ಧಾವಿಸಿದ್ದ. ಆದರೆ ಆರೋಪಿಗಳು ಮಹಿಳೆಯನ್ನು ಕಳುಹಿಸಲು ನಿರಾಕರಿಸಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *