ಅಕ್ಟೋಬರ್ 6ರವರೆಗೆ ರಿಯಾಗೆ ನ್ಯಾಯಾಂಗ ಬಂಧನ

Public TV
2 Min Read

ಮುಂಬೈ: ನಟಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಚಕ್ರವರ್ತಿಯನ್ನ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನವನ್ನ ಮುಂದುವರಿಸಿ ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈಗಾಗಲೇ 14 ದಿನಗಳ ಮುಂಬೈನ ಬೈಖುಲ್ಲಾ ಜೈಲಿನಲ್ಲಿರುವ ರಿಯಾ ಸೆರೆವಾಸ ಮುಂದುವರಿಯಲಿದೆ. ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನ ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ನ್ಯಾಯಾಲಯ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

ರಿಯಾ ಮತ್ತು ಅವರ ಸೋದರ ಶೌವಿಕ್ ಚಕ್ರವರ್ತಿ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಇದಕ್ಕೂ ಮೊದಲು ಸೆಪ್ಟೆಂಬರ್ 11ರಂದು ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ರಿಯಾ, ಶೌವಿಕ್ ಸೇರಿದಂತೆ ನಾಲ್ವರ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು. ಈ ಪ್ರಕರಣದ ಜಾಮೀನು ಅರ್ಜಿ ನಾಳೆ ಬಾಂಬೆ ಹೈಕೋರ್ಟ್ ಮುಂದೆ ಬರಲಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಡ್ರಗ್ಸ್ ಆಯಾಮ ಪಡೆದುಕೊಂಡಿತ್ತು. ಈ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಮತ್ತು ಶೌವಿಕ್ ಬಂಧನವಾಗಿದೆ. ಎನ್‍ಸಿಬಿ ವಿಚಾರಣೆ ವೇಳೆ ಸುಶಾಂತ್ ಗಾಗಿ ಡ್ರಗ್ಸ್ ಖರೀದಿ ಮಾಡುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಶೌವಿಕ್ ಅಕ್ಕನ ಸೂಚನೆ ಮೇರೆಗೆ ಪೆಡ್ಲರ್ ಗಳನ್ನು ಸಂಪರ್ಕಿಸಿ ಡ್ರಗ್ಸ್ ಖರೀದಿ ಮಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್‍ಸಿಬಿ ಹೇಳಿದೆ. ಇತ್ತ ರಿಯಾ ಡ್ರಗ್ಸ್ ಖರೀದಿಗಾಗಿ ನಡೆಸಿರುವ ಕೆಲ ವಾಟ್ಸಪ್ ಚಾಟ್ ಫೋಟೋಗಳು ವೈರಲ್ ಆಗಿದ್ದವು.

ಡ್ರಗ್ಸ್ ಪ್ರಕರಣದಲ್ಲಿ ಪ್ರತಿನಿತ್ಯ ಹೊಸ ಹೆಸರುಗಳು ಕೇಳಿ ಬರುತ್ತಿವೆ. ವಿಚಾರಣೆಯಲ್ಲಿ ರಿಯಾ ಒಟ್ಟು 25 ರಿಂದ 26 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದುವರೆಗೂ ಎನ್‍ಸಿಬಿ ಈ ಪ್ರಕರಣದಲ್ಲಿ 18 ಜನರನ್ನ ಬಂಧಿಸಿದೆ. ಈ ನಡುವೆ ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪೀತ್ ಸಿಂಗ್ ಸೇರಿದಂತೆ ಹಲವರು ಡ್ರಗ್ಸ್ ನಶೆಯ ಪಟ್ಟಿಯಲ್ಲಿದ್ದಾರೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ.

ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *