ಅಂದು ಫೇಮಸ್ ಸೂಪರ್ ಕಾರ್ ಡ್ರೈವರ್ – ಇಂದು ಅಡಲ್ಟ್ ನಟಿ

Public TV
2 Min Read

– ಕನಸು ಕೊಚ್ಚಿ ಹೋಗಿದ್ದಕ್ಕೆ ಅಡಲ್ಟ್ ವೆಬ್‍ಸೈಟ್ ತೆರೆದಳು
– ಮಾಧ್ಯಮದ ಜೊತೆ ಹೊಸ ಉದ್ಯೋಗದ ಬಗ್ಗೆ ಮಾತು

ಕ್ಯಾನ್ಬೆರಾ: ಆಸ್ಟ್ರೇಲಿಯಾದ ಮಹಿಳಾ ಸೂಪರ್ ಕಾರ್ ಡ್ರೈವರ್ ರೆನೀ ಗ್ರೇಸಿ ರೇಸಿಂಗ್ ತ್ಯಜಿಸಿದ ಬಳಿಕ ಇದೀಗ ಅಡಲ್ಟ್ ನಟಿಯಾಗಿ ಬದಲಾಗಿದ್ದಾಳೆ.

ಕಳೆದ 14 ವರ್ಷಗಳಲ್ಲಿ ಗ್ರೇಸಿ ಅವರು ಆಸ್ಟ್ರೇಲಿಯಾದ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ಡ್ರೈವರ್ ಆಗಿ ಗುರುತಿಸಿಕೊಂಡಿದ್ದಳು. ಆದರೆ ಹಣದ ಸಮಸ್ಯೆಯಿಂದಾಗಿ ಆಕೆಗೆ ಮೋಟರ್ ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಗ್ರೇಸಿ ಆಸ್ಟ್ರೇಲಿಯಾದ ಪ್ರಸಿದ್ಧ 1000 ಸೂಪರ್‍ಕಾರ್ ರೇಸ್‍ನಲ್ಲಿ ಭಾಗವಹಿಸಲು 2015ರಲ್ಲಿ ಸಿಮೋನಾ ಡಿ ಸಿಲ್ವೆಸ್ಟ್ರೊ ಜೊತೆಗೂಡಿದ್ದರು. 1998ರಿಂದ ಬಹುತೇಕ ರೇಸ್‍ಗಳಲ್ಲಿ ಗ್ರೇಸಿ ಹಾಗೂ ಸಿಮೋನಾ ಜೊತೆಯಾಗಿಯೇ ರೇಸ್‍ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಉತ್ತಮ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗ್ರೇಸಿ ರೇಸಿಂಗ್‍ನಲ್ಲೇ ಭವಿಷ್ಯ ರೂಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಆಕೆಗೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಡಲ್ಟ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

ರೇಸಿಂಗ್ ಬಿಟ್ಟ ನಂತರ ಗ್ರೇಸಿ ಸ್ಥಳೀಯ ಕಾರ್ ಯಾರ್ಡ್‍ನಲ್ಲಿ ಕೆಲಸ ಮಾಡಿದ್ದಾಳೆ. ಆದರೆ ಆಕೆಯ ಹಣಕಾಸಿನ ಸಮಸ್ಯೆ ಈ ಕೆಲಸದಿಂದ ಬಗೆಹರಿಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಡಲ್ಟ್ ವೆಬ್‍ಸೈಟ್ ಓಪನ್ ಮಾಡಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾಳೆ.

ನಂತರ ಗ್ರೇಸಿ ಅಡಲ್ಟ್ ಸ್ಟಾರ್ ಆಗಿ ಪರಿವರ್ತನೆಯಾಗಿ ಮೊದಲ ವಾರದಲ್ಲೇ ಸುಮಾರು 2.26 ಲಕ್ಷ ರೂ.(3,000 ಡಾಲರ್)ಸಂಪಾದಿಸಿದ್ದಾಳೆ. ಪ್ರಸ್ತುತ ಆಕೆಯ ಅಡಲ್ಟ್ ವೆಬ್‍ಸೈಟ್‍ಗೆ ಸುಮಾರು 7 ಸಾವಿರ ಜನ ಚಂದಾದಾರರಿದ್ದಾರೆ.

ಈ ಕುರಿತು ತನ್ನ ಮನದಾಳದ ಮಾತು ಹಂಚಿಕೊಂಡಿರುವ ಗ್ರೇಸಿ, ಈಗಿರುವ ಹಣಕಾಸಿನ ಉತ್ತಮ ಪರಿಸ್ಥಿತಿಯನ್ನು ನಾನು ಜೀವನದಲ್ಲಿ ಹಿಂದೆಂದೂ ಕಂಡಿಲ್ಲ. ನನ್ನ ಜೀವನದಲ್ಲಿ ಇದನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಅಡಲ್ಟ್ ಮಾಡೆಲ್ ಆಗಿ ಪ್ರಸ್ತುತ ವಾರಕ್ಕೆ ಸುಮಾರು 1.88 ಲಕ್ಷ ರೂ.(2,500 ಡಾಲರ್)ಗಳನ್ನು ಸಂಪಾದಿಸುತ್ತಿದ್ದೇನೆ ಎಂದಿದ್ದಾಳೆ.

https://www.instagram.com/p/8pwqz0q3i2/?utm_source=ig_embed&utm_campaign=loading

ನನ್ನ ಜೀವನದಲ್ಲಿ ಮಾಡಿದ ಅದ್ಭುತ ಕೆಲಸವಿದು. ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಈ ಕೆಲಸದಿಂದ ಸಂಪಾದಿಸುತ್ತಿದ್ದೇನೆ, ನಿಜವಾಗಿಯೂ ಈ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಯಾರು ಏನೇ ಹೇಳಿದರೂ ನನಗೆ ಅಭ್ಯಂತರವಿಲ್ಲ. ಏಕೆಂದರೆ ನಾನು ಚೆನ್ನಾಗಿದ್ದೇನೆ. ಹೆಚ್ಚು ಹಣ ಸಂಪಾದಿಸುತ್ತಿದ್ದೇನೆ. ಈಗಿರುವ ಸ್ಥಾನದಲ್ಲಿ ನಾನು ಸುಭದ್ರವಾಗಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ಸೂಪರ್‍ಕಾರ್ ಡ್ರೈವರ್ ಆಗಿದ್ದಾಗ ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ. ಸಾಕಷ್ಟು ಹಣ ಗಳಿಸಲು ಸಹ ಸಾಧ್ಯವಾಗಲಿಲ್ಲ. ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಆದರೆ ನನ್ನ ಕನಸುಗಳೇ ಕೊಚ್ಚಿ ಹೋಗುವ ಹಂತ ತಲುಪಿತು. ಹೀಗಾಗಿ ಈ ಉದ್ಯೋಗ ಪ್ರಾರಂಭಿಸಿದೆ ಎಂದು ತಮ್ಮ ಜೀವನದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *