… your content …

ಕ್ಯಾನ್ಸರ್ ರೋಗಿಯ ಕೈ ಹಿಡಿದು ಹಾಡಿದ ನರ್ಸ್- ಮನಕಲಕುವ ವಿಡಿಯೋ ವೈರಲ್

Public TV
2 Min Read

– ಅಳುತ್ತಲೇ ಹಾಡಿ ಸಂತೈಸಿದ ದಾದಿ
– ನೆಟ್ಟಿಗರ ಕಣ್ಣೀರು ತರಿಸಿತು ವಿಡಿಯೋ

ನವದೆಹಲಿ: ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಯ ಕೈ ಹಿಡಿದು ನರ್ಸ್ ಒಬ್ಬರು ಹಾಡು ಹಾಡಿದ ಮನಕಲಕುವ ಘಟನೆಯೊಂದು ನಡೆದಿದೆ.

ನರ್ಸ್ ಹಾಡುತ್ತಿರುವ ವಿಡಿಯೋ ಕಣ್ಣೀರು ತರುಸುವಂತಿದೆ. ಈ ವಿಡಿಯೋವನ್ನು ಸಿಮಾನ್ ಬಿಆರ್‍ಏಪ್‍ಸಿ ಹಾಪ್ಕಿನ್ಸ್ ಎಂಬ ಟ್ವಿಟ್ಟರ್ ಅಕೌಂಟಿನಿಂದ ಬುಧವಾರ ಅಪ್ಲೋಡ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ?:
ವೃದ್ಧೆಯೊಬ್ಬರು ಆಸ್ಪತ್ರೆ ಬೆಡ್ ನಲ್ಲಿ ಮಲಗಿದ್ದಾರೆ. ಅವರ ಅಪಕ್ಕದಲ್ಲೇ ಒಬ್ಬರು ನರ್ಸ್ ಕುಳಿತಿದ್ದು, ಮತ್ತೊಬ್ಬರು ನಿಂತು ಚಿಕಿತ್ಸೆ ನೀಡುತ್ತಿದ್ದಾರೆ. ಪಕ್ಕದಲ್ಲಿ ಕುಳಿತಿರುವ ನರ್ಸ್ ವೃದ್ಧೆಯ ಕೈ ಹಿಡಿದು ಹಾಡು ಹಾಡಲು ಆರಂಭಿಸಿದ್ದಾರೆ. ನರ್ಸ್ ಕಣ್ಣೀರು ಹಾಕುತ್ತಳೆ ಹಾಡುತ್ತಿರುವಾಗ ವೃದ್ಧೆ ಕೂಡ ಹಾಡಿಗೆ ದನಿಗೂಡಿಸಿದ್ದಾರೆ. ಈ ಮೂಲಕ ಇಬ್ಬರೂ ಹಾಡು ಹಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋ ಅಪ್ಲೋಡ್ ಮಾಡಿದವರು ಇದಕ್ಕೆ ಕ್ಯಾಪ್ಷನ್ ಕೂಡ ನೀಡಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿದ್ದ ವೃದ್ಧೆಗೆ ನರ್ಸ್ ಹಾಡು ಹಾಡುತ್ತಿದ್ದಾರೆ. ಇದು ನೀವು ನೋಡಲು ಹೊರಟಿರುವ ಅತ್ಯಂತ ಸುಂದರವಾದ ವಿಚಾರವಾಗಿದೆ. ಈ ಮೂಲಕ ಜಗತ್ತಿನಲ್ಲಿ ಅನೇಕ ಅದ್ಭುತ ಮನಸ್ಸಿನ ಅಥವಾ ವ್ಯಕ್ತಿತ್ವವುಳ್ಳ ಜನರಿದ್ದಾರೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ ಎಂದು ಬರೆದುಕೊಳ್ಳಲಾಗಿದೆ.

https://twitter.com/HopkinsBRFC/status/1306292694092787714

ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಇದೂವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಲೈಕ್ಸ್ ಗಳು ಕೂಡ ಬಂದಿದೆ. ಈ ರೀತಿಯ ವಿಚಾರಗಳು ನಮ್ಮಲ್ಲಿ ಮಾನವೀಯತೆಯ ಭರವಸೆ ಮೂಡಿಸುತ್ತವೆ. ಕೆಲವರು ನಾನು ಯಾವಾಗಲೂ ಗಂಭೀರವಾಗಿ ಕಾಣುತ್ತೇನೆ ಎಂದು ಹೇಳುತ್ತಾರೆ. ಆದರೆ ಇಂತಹ ವಿಚಾರಗಳನ್ನು ನೋಡಿದಾಗ ನನ್ನ ಮನಸ್ಸಿನ ಆಳದಲ್ಲಿ ಏನೋ ಅನಿಸುತ್ತದೆ. ಈ ಜಗತ್ತಿನಲ್ಲಿ ಇನ್ನೂ ಒಳ್ಳೆಯ ಮನಸ್ಸಿನವರಿದ್ದಾರೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಕಾಮೆಂಟ್ ಮಾಡಿ, ಇದು ತುಂಬಾ ಸುಂದರವಾಗಿದೆ. ದೇವರು ಆ ನರ್ಸ್ ನ್ನು ಆಶೀರ್ವದಿಸುತ್ತಾನೆ. ಆದರೆ ಅವರು ಅದನ್ನು ಹೇಗೆ ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬರುತ್ತಿವೆ.

https://twitter.com/pa2fl96/status/1306307880522522633

Share This Article
Leave a Comment

Leave a Reply

Your email address will not be published. Required fields are marked *