Connect with us

Cinema

ಡಾರ್ಲಿಂಗ್ ಸರ್ಪ್ರೈಸ್‌ಗೆ ಅನುಷ್ಕಾ ಶೆಟ್ಟಿ ಎಕ್ಸೈಟ್

Published

on

ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಇಂದು ‘ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಮಾಡಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ. ಪ್ರಭಾಸ್ ಅವರ ಸರ್ಪ್ರೈಸ್‌ಗೆ ನಟಿ ಅನುಷ್ಕಾ ಶೆಟ್ಟಿ ಎಕ್ಸೈಟ್ ಆಗಿ ಚಿತ್ರಕ್ಕೆ ತಮ್ಮ ಗೆಳೆಯ ಪ್ರಭಾಸ್‍ಗೆ ಶುಭ ಕೋರಿದ್ದಾರೆ.

ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ `ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್ ಈ ಚಿತ್ರದ ಪೋಸ್ಟರ್ ನನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾಹೋ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.

ಅನುಷ್ಕಾ ಪೋಸ್ಟರ್ ಹಾಕಿ ಅದಕ್ಕೆ, ಅವರು ಮಾಡುವ ಪ್ರತಿಯೊಂದು ಕೆಲಸವೂ ನನಗೆ ಆಶ್ಚರ್ಯಗೊಳಿಸುವಂತಿರುತ್ತೆ. ಅವರು ಮಾಡುವ ಕೆಲಸಗಳು ಯಾವಾಗಲೂ ಒಂದು ಹೆಜ್ಜೆ ಮೇಲಿರುತ್ತದೆ. ಅಗಸ್ಟ್ 15ಕ್ಕೆ ಸಾಹೋ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಪ್ರಭಾಸ್, ಯುವಿ ಕ್ರಿಯೆಶನ್ ಹಾಗೂ ಸುಜೀತ್‍ಗೆ ನನ್ನ ಕಡೆಯಿಂದ ಶುಭಾಶಯಗಳು. ಸಾಹೋ ಚಿತ್ರತಂಡದ ಪ್ರತಿಯೊಬ್ಬ ವ್ಯಕ್ತಿ ಹಾಗೂ ತಂತ್ರಜ್ಞರಿಗೂ ಶುಭಾಶಯಗಳು. ಎಕ್ಸೈಟೆಡ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇಂದು ಪ್ರಭಾಸ್ ಚಿತ್ರದ ಪೋಸ್ಟರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ಎಲ್ಲಾ ಡಾರ್ಲಿಂಗ್ಸ್ ಗೆ ಇಲ್ಲಿದೆ ಸರ್ಪ್ರೈಸ್‌. ನನ್ನ ಮುಂದಿನ ಸಾಹೋ ಚಿತ್ರದ ಅಧಿಕೃತ ಪೋಸ್ಟರ್. ಅಗಸ್ಟ್ 15ರಂದು ನಿಮ್ಮನ್ನು ಚಿತ್ರದ ಮೂಲಕ ಭೇಟಿ ಮಾಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.