
ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಶುಭದಿನದಂದೇ ತಮ್ಮ ಅಭಿಮಾನಿಗಳಿಗೆ ಅನುಷ್ಕಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಂಬ್ಯಾಕ್ ಚಿತ್ರದಲ್ಲಿನ ತಮ್ಮ ಲುಕ್ ರಿವೀಲ್ ಮಾಡುವ ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ.
ಕನ್ನಡತಿ ಅನುಷ್ಕಾ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳಿಗೂ ನಟಿ ತಮ್ಮ ಮುಂಬರುವ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಬರೋಬ್ಬರಿ 3 ವರ್ಷಗಳ ನಂತರ ಮತ್ತೆ ಕಂಬ್ಯಾಕ್ ಆಗುತ್ತಿರುವ ಅನುಷ್ಕಾ ಅವರ ಹೊಸ ಚಿತ್ರದ ಲುಕ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಹಿಂದಿ ಬಾಕ್ಸಾಫೀಸ್ನಲ್ಲಿ ರಿಷಬ್ ಶೆಟ್ಟಿ ಅಬ್ಬರ: 62 ಕೋಟಿ ರೂ. ಗಳಿಸಿದ ʻಕಾಂತಾರʼ
ನವೀನ್ ಪೋಲಿ ಶೆಟ್ಟಿಗೆ(Naveen Poli Shetty) ನಾಯಕಿಯಾಗಿ ಅನುಷ್ಕಾ ಶೆಟ್ಟಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿ ಎಂಬದು ಅವರ ಪಾತ್ರ ಹೆಸರಾಗಿದ್ದು, ಬಾಣಸಿಗ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಯುವಿ ಕ್ರಿಯೇಷನ್ಸ್ (Uv Creations) ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರತಂಡ ಅನುಷ್ಕಾ ಪಾತ್ರದ ಲುಕ್ ರಿವೀಲ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.
ಮಾಸ್ಟರ್ ಶೆಫ್ ಆಗಿ ನಟಿಸಿರುವ ಸ್ವೀಟಿ ಅನುಷ್ಕಾ ನಟನೆಯ, ಪಿ ಮಹೇಶ್ ಬಾಬು ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.