Connect with us

Cricket

ರೋಹಿತ್, ಕೊಹ್ಲಿ ನಡುವೆ ‘ಅನ್ ಫಾಲೋ ವಿವಾದ’

Published

on

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಗೆ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದರು ಕೂಡ ತಮ್ಮ ಅನುಪಸ್ಥಿತಿಯಲ್ಲಿ ರೋಹಿತ್‍ಗೆ ನಾಯಕತ್ವದ ನೀಡುವುದರಿಂದ ಕೊಹ್ಲಿ ಟೂರ್ನಿಗೆ ಬಂದಿದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ ಈ ವರದಿಯನ್ನು ಬಿಸಿಸಿಐ ಅಲ್ಲಗೆಳೆದಿದ್ದರೂ ಕೂಡ ಕೊಹ್ಲಿ, ರೋಹಿತ್ ನಡುವಿನ ಮನಸ್ತಾಪ ಹೆಚ್ಚಾಗಿದೆ ಎನ್ನಲಾಗಿದೆ.

ಕೆಲ ಸಮಯದ ಹಿಂದೆಯೇ ಇನ್‍ಸ್ಟಾಗ್ರಾಮ್‍ನಲ್ಲಿ ರೋಹಿತ್ ಶರ್ಮಾ ಕೊಹ್ಲಿ ಅವರನ್ನು ಅನ್ ಫಾಲೋ ಮಾಡಿದ್ದರು. ಅಲ್ಲದೇ ಇತ್ತೀಚೆಗೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನ ಕೂಡ ರೋಹಿತ್ ಅನ್ ಫಾಲೋ ಮಾಡಿದ್ದಾರೆ. ಈ ಬೆಳವಣಿಗೆಯೇ ಕೊಹ್ಲಿ, ರೋಹಿತ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದಕ್ಕೆ ಉದಾಹರಣೆ ಆಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತ ರೋಹಿತ್ ನಡೆಯಿಂದ ಬೇಸತ್ತಿರುವ ಅನುಷ್ಕಾ ಶರ್ಮಾ ಕೂಡ ರೋಹಿತ್ ಪತ್ನಿ ರಿತಿಕಾ ಅವರನ್ನು ಅನ್ ಫಾಲೋ ಮಾಡಿದ್ದಾರೆ. ತನ್ನ ಪತಿ ಕೊಹ್ಲಿಯನ್ನು ಫಾಲೋ ಮಾಡದಿದ್ದ ಸಂದರ್ಭದಲ್ಲಿ ನಾನು ಯಾಕೆ ಅವರನ್ನು ಫಾಲೋ ಮಾಡಬೇಕು ಎಂಬುವುದು ಅನುಷ್ಕಾರ ಭಾವನೆಯಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಅನುಷ್ಕಾ ಶರ್ಮಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೇಟಸ್‍ಗೆ ಹಾಕಿದ್ದ ಫೋಟೋ ಕೂಡ ಅನುಮಾನಗಳಿಗೆ ಕಾರಣವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವಿಶ್ವಕಪ್ ಸೆಮಿ ಫೈನಲ್‍ವರೆಗೂ ಟೀಂ ಇಂಡಿಯಾ ಆಟಗಾರರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುವುದು ತಿಳಿದು ಬಂದಿತ್ತು. ಆದರೆ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಆಟಗಾರರ ನಡುವಿನ ಮನಸ್ತಾಪ ಹೊರ ಬಂದಿದೆ. ಈ ಇಬ್ಬರು ಆಟಗಾರರ ನಡುವಿನ ಮನಸ್ತಾಪಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.