Connect with us

Bollywood

ಹಳೆಯ ಫೋಟೋ ಶೇರ್ ಮಾಡ್ಕೊಂಡ ಅನುಷ್ಕಾ ಶರ್ಮಾ

Published

on

ಮುಂಬೈ: ಬಾಲಿವುಡ್ ಬೆಡಗಿ ಗರ್ಭಿಣಿ ಅನುಷ್ಕಾ ಶರ್ಮಾ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಟೇಬಲ್ ಮೇಲೆ ಕುಳಿತು ಮಕ್ಕಳ ಹಾಗೆ ಕೈಯಲ್ಲಿ ಬೌಲ್ ಹಿಡಿದು ಊಟ ಮಾಡುತ್ತಿರುವ ಫೋಟೋವನ್ನ ಅನುಷ್ಕಾ ಶರ್ಮಾ ಶೇರ್ ಮಾಡಿಕೊಂಡಿದ್ದಾರೆ. ಅಂದು ಹೀಗೆ ಕುಳಿತು ಊಟ ಮಾಡುತ್ತಿದೆ. ಆದ್ರೆ ಇಂದು ಹೀಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ರೆ ಊಟ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಫೋಟೋಗೇ ಕೇವಲ ಐದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

ಡಿಸೆಂಬರ್ 11ರಂದು ಮೂರನೇ ಮದುವೆ ವಾರ್ಷಿಕೋತ್ಸವದ ದಿನದಂದು ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಅನುಷ್ಕಾ, ಮದುವೆ ಬಂಧನಕ್ಕೆ ಮೂರು ವರ್ಷ, ಶೀಘ್ರದಲ್ಲೇ ನಾವು ಮೂವರು ಆಗಲಿದ್ದೇವೆ ಎಂದು ಬರೆದುಕೊಂಡಿದ್ದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017ರಂದು ಇಟಲಿಯಲ್ಲಿ ಮದುವೆ ಆಗಿದ್ದರು.

Click to comment

Leave a Reply

Your email address will not be published. Required fields are marked *

www.publictv.in