Tuesday, 16th July 2019

ತನ್ನ ಬ್ಯೂಟಿ, ಆರೋಗ್ಯದ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

ಮುಂಬೈ: ಮೂರು ವರ್ಷಗಳಿಂದ ನಾನು ಸಸ್ಯಹಾರಿ ಆಗಿದ್ದೇನೆ. ಇದು ನನ್ನ ಜೀವನದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

ಅನುಷ್ಕಾ ಪೇಟಾ(ಪೀಪಲ್ ಫಾರ್ ದಿ ಎತಿಕಲ್ ಟ್ರೀಟ್‍ಮೆಂಟ್ ಆಫ್ ಆನಿಮಲ್ಸ್) ಜಾಗೃತಿ ಮೂಡಿಸುತ್ತಿದ್ದಾರೆ. ಈ ಜಾಹೀರಾತಿನಲ್ಲಿ “ನಾನು ಅನುಷ್ಕಾ ಶರ್ಮಾ, ನಾನು ಸಸ್ಯಹಾರಿ” ಎಂದು ಹೇಳಿದ್ದಾರೆ. ಈ ಜಾಹೀರಾತನ್ನು ಮಜೇನ್ ಅಬುಸ್ರಾರ್ ನಿರ್ದೇಶನ ಮಾಡಿದ್ದಾರೆ.

ನಾನು ಸಸ್ಯಹಾರಿ ಆಗಿರುವುದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಉತ್ತಮ ನಿರ್ಧಾರ. ನನಗೆ ಈಗ ಸಾಕಷ್ಟು ಶಕ್ತಿ ಇದೆ. ನಾನು ಈಗ ಆರೋಗ್ಯಕರವಾಗಿದ್ದೇನೆ ಎಂದು ಅನಿಸುತ್ತದೆ. ನನ್ನ ಆಹಾರದಿಂದ ಯಾವುದೇ ಪ್ರಾಣಿಗಳಿಗೆ ತೊಂದರೆಯಾಗುತ್ತಿಲ್ಲ ಎಂಬುದು ನನಗೆ ಖುಷಿ ಇದೆ ಎಂದು ಅನುಷ್ಕಾ ತಿಳಿಸಿದ್ದಾರೆ.

ಅನುಷ್ಕಾ ಶರ್ಮಾ ಕಳೆದ ಮೂರುವರೆ ವರ್ಷದಿಂದ ಸಸ್ಯಹಾರಿಯಾಗಿದ್ದಾರೆ. 2015ರಲ್ಲಿ ಅನುಷ್ಕಾ ‘ಪೇಟಾ ಇಂಡಿಯಾಸ್ ಹಾಟೆಸ್ಟ್ ಸಸ್ಯಹಾರಿ ಸೆಲೆಬ್ರಿಟಿ ಹಾಗೂ 2017ರಲ್ಲಿ ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಈಗಾಗಲೇ ನಟ ಅಮಿತಾಬ್ ಬಚ್ಚನ್, ಶಾಹಿದ್ ಕಪೂರ್, ಅಲಿಯಾ ಭಟ್, ರಾಜ್‍ಕುಮಾರ್ ರಾವ್, ಸೋನಂ ಕಪೂರ್, ವಿದ್ಯಾ ಬಾಲನ್, ಸನ್ನಿ ಲಿಯೋನ್ ಮಾಂಸವನ್ನು ಬಿಟ್ಟು ಸಸ್ಯಹಾರಿ ಆಗಿದ್ದಾರೆ.

One thought on “ತನ್ನ ಬ್ಯೂಟಿ, ಆರೋಗ್ಯದ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

Leave a Reply

Your email address will not be published. Required fields are marked *