Connect with us

Bollywood

ಜಿಮ್‍ನಲ್ಲಿ ಗರ್ಭಿಣಿ ಅನುಷ್ಕಾ ವರ್ಕೌಟ್

Published

on

ಮುಂಬೈ: ಬಾಲಿವುಡ್ ಪರಿ, ವಿರಾಟ್ ಮನದರಸಿ ಅನುಷ್ಕಾ ಶರ್ಮಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಕೆಲವೇ ದಿನಗಳಲ್ಲಿ ತಾಯಿಯಾಗಲಿರುವ ಅನುಷ್ಕಾ ಶರ್ಮಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಗರ್ಭಿಣಿಯಾದ ಬಳಿಕ ಹಲವು ಅಮೂಲ್ಯ ಕ್ಷಣಗಳು ಸೆರೆಯಾಗಿರುವ ಮುದ್ದಾದ ಫೋಟೋಗಳನ್ನ ಅನುಷ್ಕಾ ಇನ್‍ಸ್ಟಾಗ್ರಾಂನಲ್ಲಿ ಆಗಾಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವೀಡಿಯೋಗೆ ಮೆಚ್ಚುಗೆ ಸೂಚಿಸಿರುವ ಅಭಿಮಾನಿಗಳ ಬಳಗ ಆರೋಗ್ಯಕರ ಕಮೆಂಟ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮ್ಯಾಗ್‍ಜಿನ್ ಫೋಟೋಶೂಟ್ ಮಾಡಿಸಿದ್ದ ಅನುಷ್ಕಾ ಸಿಕ್ಕಾಪಟ್ಟೆ ಬೋಲ್ಡ್ ಲುಕ್ ನಲ್ಲಿ ಹುಡುಗರ ಕಿಕ್ ಏರಿಸಿದ್ದರು.

ಗರ್ಭವತಿಯಾದ ಮೇಲೆಯೂ ಅನುಷ್ಕಾ ಶೀರ್ಷಾಸನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯೋಗ ನನ್ನ ಜೀವನದ ಒಂದು ಭಾಗವಾಗಿದೆ. ನಾನು ಗರ್ಭಿಣಿಯಾಗುವ ಮುಂಚೆ ಮಾಡುತ್ತಿದ್ದ ಎಲ್ಲ ಆಸನಗಳನ್ನು ಉತ್ತಮ ಸಹಾಯದಿಂದ ಮಾಡಲು ವೈದ್ಯರು ಹೇಳಿದ್ದಾರೆ. ನಾನು ಹಲವಾರು ವರ್ಷದಿಂದ ಶೀರ್ಷಾಸನ ಮಾಡುತ್ತಿದ್ದೇನೆ. ಇಂದು ಗೋಡೆಯ ಮತ್ತು ನನ್ನ ಪ್ರೀತಿಯ ಗಂಡನ ಸಹಾಯದಿಂದ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಗರ್ಭಿಣಿಯಾದ ಸಮಯದಲ್ಲೂ ನಾನು ಈ ರೀತಿಯ ಅಭ್ಯಾಸ ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದರು.

 

View this post on Instagram

 

A post shared by Voompla (@voompla)

ಇನ್ನು ಪತಿ ವಿರಾಟ್ ಕೊಹ್ಲಿ ಎಲ್ಲ ಕ್ರಿಕೆಟ್ ನಿಂದ ರಜೆ ಪಡೆದುಕೊಂಡಿದ್ದು, ಪತ್ನಿಯ ಜೊತೆ ಕಾಲಕಳೆಯುತ್ತಿದ್ದಾರೆ. ಆಸ್ಟ್ರೇಲಿಯಾದಿಂದ ಹಿಂದಿರುಗಿದ ಬಳಿಕ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್ ನಲ್ಲಿದ್ದರು. ವರದಿ ನೆಗೆಟಿವ್ ಬಂದ ಮೇಲೆಯೇ ಪತ್ನಿಯನ್ನ ಭೇಟಿಯಾಗಿದ್ದರು.

Click to comment

Leave a Reply

Your email address will not be published. Required fields are marked *

www.publictv.in