Connect with us

Bengaluru City

ಜಿಂದಾಲ್ ದಂಗಲ್‍ಗೆ ಟ್ವಿಸ್ಟ್- ಬಿಎಸ್‍ವೈ ಶತ್ರುವೇ ಈಗ ಬಿಜೆಪಿಯ ಪರಮಮಿತ್ರ

Published

on

ಬೆಂಗಳೂರು: ಜಿಂದಾಲ್ ದಂಗಾಲ್‍ಗೆ ಸ್ಫೋಟಕ ಟ್ವಿಸ್ಟ್ ದೊರಕಿದ್ದು, ಜಿಂದಾಲ್ ಅಕ್ರಮದ ಬಗ್ಗೆ ಬಿಜೆಪಿಗೆ ಮಾಹಿತಿ ಕೊಟ್ಟವರಾರು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಒಂದು ಕಾಲದ ಬಿಎಸ್‍ವೈ ಶತ್ರುವಾಗಿದ್ದ ವ್ಯಕ್ತಿಯೇ ಈಗ ಮಿತ್ರರಾಗಿದ್ದಾರೆ. ಅವರು ಕೊಟ್ಟ ಮಾಹಿತಿಯಿಂದಾಗಿಯೇ ಬಿಜೆಪಿ ಈ ಹೋರಾಟಕ್ಕೆ ನಿರ್ಧರಿಸಿದ್ದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಜಿಂದಾಲ್‍ಗೆ ಸರ್ಕಾರಿ ಭೂಮಿ ಲೀಸ್ ಸಂಬಂಧ ಚರ್ಚೆ ನಡೆದಿದೆ. ಜಿಂದಾಲ್ ಹೋರಾಟ ಶುರುವಾಗುತ್ತಿದ್ದಂತೆಯೇ ಭೇಟಿ ನೀಡಿದ್ದು, ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಂತೋಷ್ ಭೇಟಿ ಮೂಲಕ ಜಿಂದಾಲ್ ಹೋರಾಟಕ್ಕೆ ಹಿರೇಮಠ್ ಪ್ರೇರಿಪಿಸಿದ್ರಾ ಅನ್ನೋ ಅನುಮಾನ ಮೂಡಿದೆ. ಈ ಮೊದಲು ಯಡಿಯೂರಪ್ಪ ಭೇಟಿಗೆ ಎಸ್‍ಆರ್ ಹಿರೇಮಠ್ ಅವರು ಪತ್ರ ಬರೆದಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಹಿರೇಮಠ್ ಅವರು ಆರ್‍ಎಸ್‍ಎಸ್ ನಾಯಕ ಸಂತೋಷ್ ಭೇಟಿ ಮಾಡಿದ್ದಾರೆ.

ಬೇಟಿ ವೇಳೆ ಜಿಂದಾಲ್ ಅಕ್ರಮದ ಬಗ್ಗೆ ಸಂತೋಷ್ ಅವರಿಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. ಹಿರೇಮಠ್ ಕೊಟ್ಟ ದಾಖಲೆಗಳನ್ನು ಬಿಜೆಪಿ ನಾಯಕರಿಗೆ ಸಂತೋಷ್ ತಲುಪಿಸಿದ್ದಾರೆ. ಹಿರೇಮಠ್-ಸಂತೋಷ್ ಭೇಟಿ ಬೆನ್ನಲ್ಲೇ ನಿನ್ನೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದ ಹಿರೇಮಠ್, ಇಂದು ಅವರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಅಂದು ಯಡಿಯೂರಪ್ಪ ವಿರುದ್ಧ ಸಂಗ್ರಹಿಸಿದ್ದ ದಾಖಲೆಗಳು ಇಂದು ಸಿಎಂ ವಿರುದ್ಧ ಬಳಕೆಯಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.