Thursday, 25th April 2019

Recent News

ದಿ- ವಿಲನ್ ಚಿತ್ರದ ಮತ್ತೊಂದು ಹಾಡು ರಿಲೀಸ್- ಅಭಿಮಾನಿಗಳಿಗೆ ಕಿಕ್ ನೀಡ್ತಿದೆ ಈ ಸಾಂಗ್!

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ದಿ-ವಿಲನ್’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಆಗಿದೆ.

`ನಾನ್ ಸೈಲೆಂಟಾಗಿದ್ರೆ ರಾಮ, ವೈಲೆಂಟ್ ಆದ್ರೆ ರಾವಣ’ ಅನ್ನೋ ಲಿರಿಕ್ಸ್ ನಿಂದ ಶುರುವಾಗುವ ಈ ಸಾಂಗ್, ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಜೋಗಿ ಪ್ರೇಮ್ ಸಾಹಿತ್ಯವಿರುವ ಈ ಹಾಡಿಗೆ ಅರ್ಜುನ್ ಜನ್ಯ ಕ್ಯಾಚಿ ಟ್ಯೂನ್ ಹಾಕಿಕೊಟ್ಟಿದ್ದಾರೆ.

ಬಿಡುಗಡೆಯಾದ ಈ ಹಾಡಿನಲ್ಲಿ ಡಾ. ರಾಜ್‍ಕುಮಾರ್ ಅವರ ‘ಟಿಕ್ ಟಿಕ್’ ಹಾಡಿನ ಕೆಲವು ಸಾಲುಗಳನ್ನು ಬಳಸಿಕೊಂಡಿದ್ದಾರೆ. ಕೈಲಾಶ್ ಕೇರ್, ಜೋಗಿ ಪ್ರೇಮ್ ಹಾಗೂ ವಿಜಯ್ ಪ್ರಕಾಶ್ ಮೂವರು ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇತ್ತೀಚೆಗೆ ದಿ-ವಿಲನ್ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. `ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ, ಕೋಟೆ ಕಟ್ಟಿ ಮೆರೆದವನಲ್ಲ ಆದ್ರೂ ರಾಜ್ಯ ಆಳುತ್ತವನಲ್ಲ’ ಎಂದು ಸಾಗುವ ಈ ಹಾಡು ಜೋಗಿ ಪ್ರೇಮ್ ಲೇಖನದಲ್ಲಿ ಮೂಡಿ ಬಂದಿತ್ತು. ಶಂಕರ್ ಮಹಾದೇವನ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ವಿಲನ್ ಟೈಟಲ್ ಟ್ರ್ಯಾಕ್ ಕೇಳುಗರಿಗೆ ಸಖತ್ ಕಿಕ್ ನೀಡಿತ್ತು.

ಮೊದಲನೇ ಹಾಡು ರಿಲೀಸ್ ಆದ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಪಡೆದುಕೊಂಡಿತ್ತು. ಈ ಹಾಡಿನಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರ್ತಾರಾ ಇಲ್ಲವೋ ಅನ್ನೋದನ್ನ ಪ್ರೇಮ್ ಸಸ್ಪೆನ್ಸ್ ಆಗಿಟ್ಟಿದ್ದರು. ಆದರೆ ರಿಲೀಸ್ ಆಗಿರುವ ಲಿರಿಕಲ್ ವಿಡಿಯೋದಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರುವ ಮೇಕಿಂಗ್‍ನ ಬಳಸಿಕೊಂಡಿದ್ದಾರೆ.

One thought on “ದಿ- ವಿಲನ್ ಚಿತ್ರದ ಮತ್ತೊಂದು ಹಾಡು ರಿಲೀಸ್- ಅಭಿಮಾನಿಗಳಿಗೆ ಕಿಕ್ ನೀಡ್ತಿದೆ ಈ ಸಾಂಗ್!

Leave a Reply

Your email address will not be published. Required fields are marked *