Connect with us

Cinema

ಅಂಕೋಲ ಉತ್ಸವದಲ್ಲಿ ಚಂದನ್ ಶೆಟ್ಟಿ ಹವಾ – ಬೃಹತ್ ವೇದಿಕೆಯಲ್ಲೇ ಬೇಬಿಡಾಲ್‍ಗೆ ವಿಡಿಯೋ ಕಾಲ್

Published

on

ಕಾರವಾರ: ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಉತ್ಸವಕ್ಕೆ ಕನ್ನಡದ ಖ್ಯಾತ ರ‍್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಆಗಮಿಸಿದ್ದು, ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದ್ದಾರೆ.

ಗುರುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಜೈ ಹಿಂದ್ ಮೈದಾನದಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್‍ಬಾಸ್ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ ಆಗಮಿಸಿದ್ದು, ಅನೇಕ ಹಾಡುಗಳನ್ನು ಹಾಡಿ, ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇದೇ ಅಂಕೋಲ ಉತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಅವರ ಪತ್ನಿ ಶ್ರಾವಣಿ ಇಬ್ಬರು ಆಗಮಿಸಿದ್ದು, ಬಿಗ್ ಮನೆಯಲ್ಲಿ ಇದ್ದಾಗ ಚಂದನ್ ಶೆಟ್ಟಿ, ಶ್ರಾವಣಿಗಾಗಿ ಒಂದು ಹಾಡು ಬರೆದಿದ್ದರು. ಆ ಹಾಡನ್ನು ವೇದಿಕೆಯ ಮೇಲೆ ಹಾಡಿದ್ದು, ಅದಕ್ಕೆ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಇದೇ ವೇದಿಕೆಯ ಮೇಲೆ ಚಂದನ್ ಶೆಟ್ಟಿ, ನಿವೇದಿತಾ ಗೌಡಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

ಉತ್ಸವದಲ್ಲಿ ಅಭಿಮಾನಿಗಳು ಕಳೆದ ಬಾರಿ ಕುಮುಟಾಗೆ ಬಂದಿದ್ದಾಗ ನೀವು ನಿವೇದಿತಾ ಗೌಡಗೆ ಕಾಲ್ ಮಾಡಿದ್ರಿ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ಕಳೆದ ಬಾರಿ ಆಡಿಯೋ ಕಾಲ್ ಮಾಡಿದ್ದೆ, ಈ ಬಾರಿ ವಿಡಿಯೋ ಕಾಲ್ ಮಾಡುತ್ತೇನೆ ಎಂದು ನಿವೇದಿತಾ ಗೌಡಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಬಳಿಕ ನಿವೇದಿತಾ ಗೌಡ ಅವರು ಎಲ್ಲರೂ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್ ಮಾಡಿ ಎಂದು ವಿಶ್ ತಿಳಿಸಿದ್ದಾರೆ.

ಈ ಮಧ್ಯೆ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಮೈಕ್ ನೀಡಿದ್ದರು. ಆಗ ಮೈಕ್ ಸಿಕ್ಕಿದ್ದೇ ತಡ ಚಂದನ್ ಶೆಟ್ಟಿಗೆ ಬಿಗ್ ಬಾಸ್‍ನಲ್ಲಿ ಪ್ರತಿಸ್ಪರ್ಧಿಯಾದ ಶೃತಿ ಜೊತೆ ಇನ್ನೂ ಸಂಪರ್ಕದಲ್ಲಿ ಇದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಚಂದನ್ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ರೀತಿ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಅವರೆಲ್ಲರಿಗೂ ಸಂತಸದಿಂದ ಉತ್ತರ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv