Saturday, 7th December 2019

Recent News

ವಿಶ್ವ ಸುಂದರಿಯ ಕತೆ ಹೇಳುವ ಅಂಜು ಚಿತ್ರದ ಮುಹೂರ್ತ

ಬೆಂಗಳೂರು: ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಅಂಜು ಎಂಬ ಬಾಲಕಿ ಮುಂದೆ ತನ್ನ ಪರಿಶ್ರಮದಿಂದ ಸಾಧನೆ ಮಾಡಿ ವಿಶ್ವಸುಂದರಿಯಾಗಿ ಇತಿಹಾಸ ನಿರ್ಮಿಸುವ ಕಥಾನಕ ಹೊಂದಿರುವ ಚಿತ್ರ ಅಂಜು. ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ಬಿ.ಟಿ.ಎಂ. ಲೇಔಟ್ ನ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ನಡೆಯಿತು.

ನಾಯಕಿ ಅಂಜನಾ ಶೆಟ್ಟಿ ಬಾಬಾ ಸನ್ನಿಧಿಯಲ್ಲಿ ಪ್ರಾರ್ಥಿಸುವ ಚಿತ್ರದ ಮುಹೂರ್ತ ಸನ್ನಿವೇಶಕ್ಕೆ 2015ರ ಮಿಸಸ್ ಏಷ್ಯಾ ವಿಜೇತೆ ಪ್ರತಿಭಾ ಆರಂಭ ಫಲಕ ತೋರಿಸಿದರೆ ಜಿ.ವಿ. ರಾಮರಾವ್ ಕ್ಯಾಮೆರಾ ಚಾಲನೆ ಮಾಡಿದರು.

ಎಂ.ಎಸ್. ರಾಜಶೇಖರ್, ರೇಣುಕಾಶರ್ಮ, ದೊರೆ ಭಗವಾನ್ ಅವರಂಥ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಎ. ವಿಶ್ವನಾಥ್ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ. ಭದ್ರಾವತಿ ಮೀನಾ ಕುಮಾರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕಿ ಅಂಜನಾ ಶೆಟ್ಟಿ ರಂಗಾಯಣದ ಪ್ರತಿಭೆ. ಹಲವಾರು ನಾಟಕ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು ಮೊದಲ ಬಾರಿಗೆ ನಾಯಕಿಯಾಗಿದ್ದಾರೆ.

ಶಿವಣ್ಣ ಅಭಿನಯದ ಚಿತ್ರದಲ್ಲಿ ಕೂಡಾ ಈಕೆ ನಟಿಸುತ್ತಿದ್ದಾರೆ. ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್‍ಗೆ ಕೂಡಾ ಇದು ಮೊದಲ ಚಿತ್ರ. ಬೇಬಿ ಅಂಕಿತಾ ನಟಿಸುತ್ತಿದ್ದಾರೆ. ಅಲ್ಲದೆ, ತಾಯಿ ಪಾತ್ರಕ್ಕೆ ಹೆಸರಾಂತ ಹಿರಿಯ ನಟಿಯೊಬ್ಬರು ಆಯ್ಕೆಯಾಗಲಿದ್ದಾರೆ.

ರಾಜ್ ಕಿಶೋರ್ ಅವರ ಸಂಗೀತ, ಮನು ಕ್ಯಾಮೆರಾ, ವಿಕ್ರಮ್ ಸಾಹಸ ಚಿತ್ರಕ್ಕಿದೆ. ಎಂ. ರಾಜೇಂದ್ರ ಕುಮಾರ್ ಆರ್ಯ, ಜಿ.ವಿ. ರಾಮರಾವ್, ಮಹೇಶ್ ಕುಮಾರ್, ವೈಭವ್, ಮಂಡ್ಯ ನಾಗರಾಜ್, ಶ್ರೀನಿವಾಸ್, ರೂಪಾ, ಸುಪ್ರೀತಾ ಸೇರಿದಂತೆ ಇನ್ನೂ ಅನೇಕ ಗಣ್ಯರು ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Leave a Reply

Your email address will not be published. Required fields are marked *