Connect with us

Bollywood

ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

Published

on

ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಎಲ್ಲಾ ತಪ್ಪು ಕಾರಣಗಳಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಪಿಲ್ ಮತ್ತೊಮ್ಮೆ ತನ್ನ ಶೋನ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಬಾರಿ ಅಜಯ್ ದೇವ್‍ಗನ್ ಜೊತೆ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡುವ ಮೂಲಕ ಅಜಯ್ ಕೋಪಕ್ಕೆ ಗುರಿಯಾಗಿದ್ದಾರೆ.

ಅಜಯ್ ದೇವ್‍ಗನ್ ತಮ್ಮ ಮುಂಬರುವ `ಬಾದ್‍ಶಾವೊ’ ಸಿನಿಮಾದ ಪ್ರಮೋಷನ್ ಗಾಗಿ ಕಪಿಲ್ ಶರ್ಮಾಗೆ ಆಗಮಿಸಿದ್ದರು. ಈ ವೇಳೆ ಅಜಯ್ ಚಿತ್ರದ ಸಹ ನಟರಾದ ಇಲಿಯಾನ ಡಿಕ್ರೂಸ್, ಇಮ್ರಾನ್ ಹಶ್ಮಿ, ಇಶಾ ಗುಪ್ತಾ ಮತ್ತು ನಿರ್ದೇಶಕ ಮಿಲನ್ ಲುತ್ರಿಯ ಸಹ ಬಂದಿದ್ದರು. ಈ ವೇಳೆ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಾರ್ಯಕ್ರಮ ರದ್ದಾಗಿದೆ.

 

ಒಂದು ಗಂಟೆಗಳವರೆಗೆ ಕಾದ ನಂತರ ಅಜಯ್ ದೇವ್‍ಗನ್ ಕೋಪಗೊಂಡು ಕಪಿಲ್ ಶರ್ಮಾ ಶೋ ಸೆಟ್‍ನಿಂದ ಹೊರ ನಡೆದಿದ್ದು, ಇನ್ನ್ಮುಂದೆ ಯಾವತ್ತು ಹಿಂದಿರುಗುವುದಿಲ್ಲ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಶಾರೂಖ್ ಖಾನ್, ಅನಿಲ್ ಕಪೂರ್, ಅರ್ಜುನ್ ರಾಂಪಾಲ್ ಸೆಟ್ಟಗೆ ಬಂದಾಗಲೂ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿತ್ತು.

ಕೆಲವು ದಿನಗಳಿಂದ ಕಪಿಲ್ ಕಾರ್ಯಕ್ರಮಕ್ಕೂ ಮುನ್ನ ಒತ್ತಡಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಕಪಿಲ್ ಅವರಲ್ಲಿ ಬಿಪಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಪಿಲ್ ಹೀಗೆ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಮತ್ತೆ ಈ ರೀತಿ ಮಾಡಿದ್ದಾರೆ. ಸ್ಟಾರ್‍ಗಳು ಹಿಂದುರುಗಿ ಹೋಗುವುದು ನಮಗೆ ಬೇಸರ ತಂದಿದ್ದೆ. ‘ಲೇಕಿನ್ ಕ್ಯಾ ಕರೇ’ ಇದು ಅವರ ಆರೋಗ್ಯದ ವಿಷಯ ಎಂದು ಕಪಿಲ್ ಶರ್ಮಾ ಶೋ ತಂಡದವರು ಹೇಳಿದ್ದಾರೆ.