Bengaluru City
ಅಂಗನವಾಡಿ ತೆರೆಯಲು ಸಿದ್ಧತೆ – ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಶಾಲೆಗೆ ತೆರೆಯುವ ಮುನ್ನ ಅಂಗನವಾಡಿ ತೆರೆಯಲು ಸಿದ್ಧತೆ ನಡೆಸಬೇಕಾಗಿದೆ. ಅಂಗನವಾಡಿ ತೆರೆದು ಪಾಠ ಮಾಡಲು ಸೂಚನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದೆ. ಶಾಲೆ ಆರಂಭವಾಗದೇ ಅಂಗನವಾಡಿ ಆರಂಭಕ್ಕೆ ಪೋಷಕರ ಅಸಮಾಧಾನ ಹೊರಹಾಕಿದ್ದಾರೆ. ಅಂಗನವಾಡಿ ಸಿಬ್ಬಂದಿ ಸಹ ಪೋಷಕರ ಮನವೊಲಿಸಲು ಪ್ರಯತ್ನ ಮಾಡುತ್ತಿದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಅಂಗನವಾಡಿ ಕೇಂದ್ರ ಆರಂಭಿಸಲು ಮಾರ್ಗಸೂಚಿ ಬಿಡುಗಡೆಯಾಗಿದೆ.
ಮಾರ್ಗಸೂಚಿಗಳು:
1. ಅಂಗನವಾಡಿ ಕೇಂದ್ರಗಳ ಸ್ಯಾನಿಟೈಜರ್.
2. ಕೋವಿಡ್ ಆರ್ ಟಿ ಪಿಸಿಆರ್ ಟೆಸ್ಟ್ ಗೆ ಸಿಬ್ಬಂದಿ ಕಡ್ಡಾಯ ಒಳಪಡಬೇಕು. ನೆಗೆಟಿವ್ ರಿಪೋರ್ಟ್ ಪಡೆದಿರಬೇಕು.
3. ಅಂಗನವಾಡಿ ಕೇಂದ್ರ ಶುಚಿತ್ವ ಕಾಪಾಡಬೇಕು.
4. ಅಂಗನವಾಡಿ ಕೇಂದ್ರ ಪಾಕೋಪಕರಣ ಶುಚಿಗೊಳಿಸುವುದು.
5. ಶೌಚಾಲಯ ಸ್ವಚ್ಛಗೊಳಿಸಬೇಕು.
6. ಅಂಗನವಾಡಿ ಕೇಂದ್ರದ ಸಹಾಯಕಿ ಮತ್ತು ಕಾರ್ಯಕರ್ತೆ ಹಾಜರಿರಬೇಕು.
7. 3 ರಿಂದ 6 ವರ್ಷದ ಮಕ್ಕಳಿಗೆ ಬೆಳಗ್ಗೆ 9 ರಿಂದ 12:30 ತರಗತಿ ನಡೆಸಬೇಕು.
8. ಅಂಗನವಾಡಿ ಬರುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು.
9. ಮಕ್ಕಳು ಕೈ ತೊಳೆಯಲು ಸಾಬೂನಿನ ವ್ಯವಸ್ಥೆ ಮಾಡಿಸಬೇಕು.
10. ಮಕ್ಕಳ ಅಂಗನವಾಡಿಗೆ ಬಂದಾಗ, ಹೋಗುವಾಗ ಕೈ ತೊಳೆಯುವುದು ಕಡ್ಡಾಯ.
11. ಎಲ್ಲ ಮಕ್ಕಳಿಗೆ ಮಾಸ್ಕ್ ಕಡ್ಡಾಯ.
12. ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
13. ಜ್ವರ, ನೆಗಡಿ, ಕೆಮ್ಮು ಲಕ್ಷಣ ಕಂಡು ಬಂದ ಮಕ್ಕಳ ಶಾಲೆಗೆ ಕಳುಹಿಸದೇ ಇರುವುದು.
14. ಮಕ್ಕಳಿಗೆ ಪೌಷ್ಟಿಕ ಆಹಾರ ಮನೆಗೆ ಕಳುಹಿಸುವುದು.
15. ಕಂಟೈನ್ಮೆಂಟ್ ಹೊರಗಿರುವ ಅಂಗನವಾಡಿ ಮಾತ್ರ ಪ್ರಾರಂಭ ಮಾಡುವುದು.
ಈ ಸಂಬಂಧ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್, ಅಂಗನವಾಡಿ ಸಹಾಯಕರಿಗೆ ಸಿಬ್ಬಂದಿಗೆ ಆರ್ ಟಿ-ಪಿಸಿಆರ್ ಕಡ್ಡಾಯ ಮಾಡಲಾಗಿದೆ. ಇದಕ್ಕೆಲ್ಲ ಸಹಕಾರ ಕೊಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
