Connect with us

Karnataka

‘ಇಡ್ಲಿ ಅಮ್ಮಾ’ ಎಂದೇ ಖ್ಯಾತರಾಗಿರೋ ವೃದ್ಧೆಗೆ ಮನೆ ಕಟ್ಟಿಕೊಡಲು ಮುಂದಾದ ಮಹಿಂದ್ರಾ ಗ್ರೂಪ್

Published

on

ಚೆನ್ನೈ: ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಎಲ್ಲಡೆ ಸುದ್ದಿಯಾಗಿದ್ದ ವೃದ್ಧೆಗೆ ಮಹಿಂದ್ರಾ ಗ್ರೂಪ್ ನಿಂದ ಮನೆ ಕಟ್ಟಿಸಿಕೊಡಲಾಗುತ್ತಿದೆ.

ತಮಿಳುನಾಡಿನ ಮೂಲದ ವೃದ್ಧೆ ಕಮಥಾಲ್ ತಮ್ಮ ಉತ್ತಮವಾದ ಕೆಲಸದ ಮೂಲಕವಾಗಿ ಸುದ್ದಿಯಾಗಿದ್ದರು. ಕಡಿಮೆ ಬೆಲೆಗೆ ಇಡ್ಲಿ ಮಾರಾಟ ಮಾಡಿ ‘ಇಡ್ಲಿ ಅಮ್ಮಾ’ ಎಂದೆ ಖ್ಯಾತಿಯಾಗಿದ್ದರು. ಇವರ ಕಾರ್ಯವನ್ನು ಮೆಚ್ಚಿ ಮನೆ ಕಟ್ಟಿಸಿಕೊಡಲು ಮುಂದಾಗಿದ್ದಾರೆ.

ತಮಿಳುನಾಡಿನ ಕೊಯಂಬತ್ತೂರ್ ನಗರದ ಹೊರವಲಯದಲ್ಲಿರುವ ವಡಿವೇಲಂಪೊಲಯಂನಲ್ಲಿ ಕೇವಲ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಕಮಲಥಾಲ್ ಎಲ್ಲರ ಗಮನ ಸೆಳೆದಿದ್ದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಯಾರೋಬ್ಬರ ಸ್ಪೂರ್ತಿದಾಯಕ ಕಥೆಯಲ್ಲಿ ಅಪರೂಪಕ್ಕೆ ಒಬ್ಬರು ಸಣ್ಣ ಪಾತ್ರ ನಿರ್ವಹಿಸುತ್ತಾರೆ. ಸಣ್ಣ ಪಾತ್ರ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಡ್ಲಿ ಅಮ್ಮಾ ಎಂದೆ ಪ್ರಸಿದ್ಧರಾಗಿರುವ ಕಮಲಥಾಲ್ ಅವರಿಗೆ ಧನ್ಯವಾದಗಳು. ಶೀಘ್ರದಲ್ಲಿಯೆ ಮನೆಯಿಂದ ಇಡ್ಲಿ ತಯಾರಿಸಿ ಮಾರಾಟ ಮಾಡಲು ಮನೆಯೊಂದನ್ನು ಹೊಂದಲಿದ್ದಾರೆ ಎಂದು ಆಟೋಮೊಬೈಲ್ ಬ್ಯುಸಿನೆಸ್ ಮ್ಯಾನ್ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವೃದ್ಧೆಯ ಉತ್ತಮ ಕಾರ್ಯವನ್ನು ಮೆಚ್ಚಿ ಇಡ್ಲಿ ಮಾಡಿ ಮಾರಾಟ ಮಾಡಲು ಒಂದು ವ್ಯವಸ್ಥೆ ಕಲ್ಪಿಸಿಕೊಡುತ್ತಿರುವ ಆನಂದ್ ಮಹಿಂದ್ರಾ ಅವರ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Click to comment

Leave a Reply

Your email address will not be published. Required fields are marked *