Connect with us

Chamarajanagar

ಲಾರಿಯನ್ನು ಅಡ್ಡಗಟ್ಟಿ ಕಬ್ಬು ತಿಂದ ಕಾಡಾನೆ: ವಿಡಿಯೋ

Published

on

ಚಾಮರಾಜನಗರ: ಕಬ್ಬನ್ನು ತಿನ್ನುವ ಸಲುವಾಗಿ ಕಾಡಾನೆಯೊಂದು ಲಾರಿಯನ್ನೇ ಅಡ್ಡಗಟ್ಟಿರುವ ಘಟನೆ ಚಾಮರಾಜನಗರ ಮತ್ತು ತಮಿಳುನಾಡಿನ ಗಡಿ ಪ್ರದೇಶವಾದ ಆಸನೂರಿನಲಗಲ್ಲಿ ನಡೆದಿದೆ.

ಆಸನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಬ್ಬಿನ ಲಾರಿಯನ್ನು ಕಾಡಾನೆಯೊಂದು ಅಡ್ಡಗಟ್ಟಿದೆ. ಬಳಿಕ ಲಾರಿಯಲ್ಲಿದ್ದ ಕಬ್ಬನ್ನು ತಿಂದಿದೆ. ಈ ವೇಳೆ ಚಾಲಕ ಲಾರಿಯನ್ನು ಚಲಿಸದೇ ಆನೆ ಕಬ್ಬು ತಿನ್ನುವವರೆಗೂ ಅಲ್ಲಿಯೇ ನಿಂತಿದ್ದನು.

ಕಾಡಾನೆ ಹೊಟ್ಟೆ ತುಂಬಾ ಕಬ್ಬನ್ನು ತಿಂದ ಬಳಿಕ ತನ್ನ ಪಾಡಿಗೆ ಕಾಡಿನೊಳಗೆ ಹೊರಟು ಹೋಗಿದೆ. ಕಾಡಾನೆಯೂ ಕಬ್ಬನ್ನು ತಿನ್ನುತ್ತಿದ್ದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅಷ್ಟೇ ಅಲ್ಲದೆ ಈ ದೃಶ್ಯ ಕಣ್ತುಂಬಿಕೊಳ್ಳಲು ಹಲವು ಮಂದಿ ತಮ್ಮ ವಾಹನದಿಂದ ಕೆಳಗೆ ಇಳಿದು, ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿದ್ದಾರೆ.

https://www.youtube.com/watch?v=zgej10TlUsM