ಸೇಡಂ | ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

1 Min Read

ಕಲಬುರಗಿ: ಸೇಡಂ (Sedam) ಪಟ್ಟಣದ ಹೊರವಲಯದಲ್ಲಿ ಹರಿಯುವ ಕಮಲಾವತಿ ನದಿಯಲ್ಲಿ (Kamalavati River) ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ನದಿಗೆ ಸಿಮೆಂಟ್ ಕಾರ್ಖಾನೆಯ ವಿಷಪೂರಿತ ನೀರಿರುವುದರಿಂದ ಮೀನುಗಳ ಸಾವನ್ನಪ್ಪಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರ್ಖಾನೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇಡಂ ಜನರ ಜೀವನಾಡಿಯಾದ ನೀರಿನ ಪರೀಕ್ಷೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ತುಂತುರು ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಈ ನೀರು ಪ್ರಾಣಿ ಪಕ್ಷಿಗಳು, ದನಕರುಗಳು ಕುಡಿದ್ರೆ ಯಾರು ಹೋಣೆ? ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯುವತಿ ವಿಚಾರಕ್ಕೆ ಕಿರಿಕ್‌ | ಯುವಕರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ – ವಿಡಿಯೋ ವೈರಲ್‌

Share This Article
Exit mobile version