ಶಿವಮೊಗ್ಗ ದಸರಾ ಅವಘಡದಲ್ಲಿ ಹಾನಿಯಾಗಿದ್ದ ಅಂಬಾರಿ, ವಿಗ್ರಹವನ್ನು ಪರಿಶೀಲಿಸಿದ ಸಚಿವ ಮಧು ಬಂಗಾರಪ್ಪ

1 Min Read

ಶಿವಮೊಗ್ಗ: ನಗರದಲ್ಲಿ (Shivamogga) ನಡೆದ ದಸರಾ (Dasara) ಜಂಬೂಸವಾರಿ ವೇಳೆ ಅಂಬಾರಿ ಹೊತ್ತ ಸೋಮಣ್ಣ ಆನೆ (Elephant) ದಿಕ್ಕಾಪಾಲಾಗಿ ಓಡಿದ್ದರಿಂದ ಬಿದ್ದು ಹಾನಿಯಾಗಿರುವ ಬೆಳ್ಳಿ ಅಂಬಾರಿ ಹಾಗೂ ಚಾಮುಂಡೇಶ್ವರಿ ವಿಗ್ರಹವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಪರಿಶೀಲಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿದ್ದ ವಿಗ್ರಹ ಹಾಗೂ ಮಂಟಪವನ್ನ ಅಧಿಕಾರಿಗಳ ಜೊತೆ ಅವರು ವೀಕ್ಷಿಸಿದರು. ಬಳಿಕ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಘಟನೆ ಸಂಬಂಧ ಮಾಹಿತಿ ಪಡೆದರು. ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಅರಣ್ಯಾಧಿಕಾರಿಗಳು ಸಚಿವರಿಗೆ ಅವಘಡ ಸಂಭವಿಸಿದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದನ್ನೂ ಓದಿ: ಶಿವಮೊಗ್ಗ | ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಡಿದ ಆನೆ – ಕಂಗಾಲಾದ ಜನ

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅವಘಡದ ವೇಳೆ ದೇವಿಯ ವಿಗ್ರಹ ಹಾಗೂ ಮಂಟಪಕ್ಕೆ ಹಾನಿಯಾಗಿದೆ. ಆದರೆ, ಆಭರಣಗಳಿಗೆ ಯಾವುದೇ ನಷ್ಟ ಸಂಭವಿಸಿಲ್ಲ. ಇತರೆ ಸಣ್ಣಪುಟ್ಟ ನಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿಸಿಎಫ್ ಹನುಮಂತಪ್ಪ, ಡಿಎಫ್ಓ ಪ್ರಸನ್ನಕೃಷ್ಣ ಪಟಗಾರ್, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಎಸ್‌ಪಿ ಬಿ.ನಿಖಿಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಸಿ.ಯೋಗೀಶ್‌ ಮತ್ತಿತರರು ಇದ್ದರು. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲಿ ಜಂಬೂ ಸವಾರಿ ಸ್ಥಗಿತ – ಮುಂದುವರೆದ ಪೂಜೆ

Share This Article
Exit mobile version