Tuesday, 19th November 2019

Recent News

ಮಹಾತ್ಮ ಗಾಂಧೀಜಿ ಕನಸು ರಾಹುಲ್ ಗಾಂಧಿಯಿಂದ ಪೂರ್ಣ: ಅಮಿತ್ ಶಾ

ಚಂಡೀಘಡ್: ಕಾಂಗ್ರೆಸ್ ಬಗ್ಗೆ ಮಹಾತ್ಮ ಗಾಂಧೀಜಿ ಕಂಡಿರುವ ಕನಸನ್ನು ಈಗ ಬೇರೊಬ್ಬ ಗಾಂಧಿ (ರಾಹುಲ್ ಗಾಂಧಿ) ಪೂರ್ಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹರಿಯಾಣದ ರೋಹ್ಟಕ್ ನಲ್ಲಿ ಹೇಳಿದ್ದಾರೆ.

ಸ್ವತಂತ್ರದ ಬಳಿಕ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಕನಸು ಕಂಡಿದ್ದರು. ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ವಿಜಯದ ಬಳಿಕ ಅಮಿತ್ ಶಾ ಹರಿಯಾಣದಲ್ಲಿ ಬಿಜೆಪಿ ಮಿಷನ್ 2019 ಹೆಸರಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ಮೂರು ದಿನಗಳಿಂದ ಅಮಿತ್ ಶಾ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವ ಮೂಲಕ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದು, ಸಿಎಂ ಮನೋಹರ್‍ಲಾಲ್ ಖಟ್ಟರ್ ನೇತೃತ್ವದ ಸರ್ಕಾರದ ಆಡಳಿತದ ಸಮೀಕ್ಷೆಯನ್ನೂ ಸಹ ಅಮಿತ್ ಶಾ ನಡೆಸುತ್ತಿದ್ದಾರೆ. ಅಮಿತ್ ಶಾ ಹರಿಯಾಣದ ಬಿಜೆಪಿ ನಾಯಕರೊಂದಿಗೆ 17 ಸಭೆ ಮತ್ತು ಕಾರ್ಯಕರ್ತರೊಂದಿಗೆ 27 ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. 2019ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗಾಗಲೇ ಅದರ ತಯಾರಿಯನ್ನು ನಡೆಸುತ್ತಿದೆ.

Leave a Reply

Your email address will not be published. Required fields are marked *