Connect with us

Latest

ನಮಗೆ ಒಂದು ಅವಕಾಶ ಕೊಡಿ, ‘ಸೋನಾರ್ ಬಂಗಾಳ’ ನಿರ್ಮಿಸುತ್ತೇವೆ- ಅಮಿತ್ ಶಾ

Published

on

– ಇದು ಸಂತಸದ ಸಮಯ, ಮಮತಾ ಬ್ಯಾನರ್ಜಿ ಆಡಳಿತ ಅಂತ್ಯವಾಗಲಿದೆ
– ಚುನಾವಣೆಯಲ್ಲಿ ಬೃಹತ್ ಗುರಿ ಕೊಟ್ಟ ಶಾ

ಕೋಲ್ಕತ್ತಾ: ಒಂದು ಅವಕಾಶ ನಮಗೆ ಕೊಟ್ಟು ನೀಡಿ. ಪಶ್ಚಿಮ ಬಂಗಾಳವನ್ನು ಸೋನಾರ್ ಬಂಗಾಳ ಮಾಡುತ್ತೇವೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಜೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಜನರಿಗೆ ಮುಂದಿನ 5 ವರ್ಷದ ಅವಧಿಯಲ್ಲಿ ಸೋನಾರ್ ಬಂಗಾಳ (ಗೋಲ್ಡನ್ ಬಂಗಾಳ) ನಿರ್ಮಿಸುವ ಅಶ್ವಾಸನೆ ನೀಡಿರುವ ಅಮಿತ್ ಶಾ, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಅವರ ಆಡಳಿತ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸಿದ್ಧತೆ ನಡೆಸಿದ್ದು, ಬಂಗಾಳದಲ್ಲಿ ಪಕ್ಷವನ್ನು ಗೆಲ್ಲಿಸಲೇ ಬೇಕೆಂದು ಪಣ ತೊಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಚುನಾವಣಾ ಪೂರ್ವ ತಯಾರಿ ಮೇಲ್ವಿಚಾರಣೆ ನಡೆಸಲು ಪಶ್ಚಿಮ ಬಂಗಾಳಕ್ಕೆ 2 ದಿನಗಳ ಪ್ರವಾಸವನ್ನು ಕೈಗೊಂಡಿದ್ದು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ 294 ಸ್ಥಾನಗಳಲ್ಲಿ 200 ಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಅಮಿತ್ ಶಾ ಬೃಹತ್ ಗುರಿಯನ್ನು ನೀಡಿದ್ದು, ಸಿಎಂ ಮಮತಾ ಬ್ಯಾನರ್ಜಿ ಆಡಳಿತದ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದಾರೆ. ಅಭಿವೃದ್ಧಿಗಾಗಿ ಮೋದಿ ಸರ್ಕಾರಕ್ಕೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿರುವ ಅವರು, ರಾಜ್ಯ ಸರ್ಕಾರ ಕೊರೊನಾ ಹಾಗೂ ಪ್ರವಾಹದ ಸಂದರ್ಭದಲ್ಲೂ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದೆ. ಇಲ್ಲಿನ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದ್ದು, ಹಲವು ಕಾರ್ಯಕರ್ತರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಬಂಗಾಳದ ಜನರು ಕಾಂಗ್ರೆಸ್ ಸೇರಿದಂತೆ ತೃಣಮೂಲ ಪಕ್ಷಕ್ಕೆ ಆಡಳಿತ ನಡೆಸಲು ಅವಕಾಶ ನೀಡಿದ್ದು, ನಮಗೆ ಒಮ್ಮೆ ಆಡಳಿತ ನಡೆಸುವ ಅವಕಾಶ ನೀಡಿ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮುಂದಿನ 5 ವರ್ಷ ಅಭಿವೃದ್ಧಿಯ ಆಡಳಿತ ನೀಡಿ ಸೋನಾರ್ ಬಂಗಾಳ ನಿರ್ಮಿಸುತ್ತೇವೆ. ದೇಶದ ಗಡಿ ಪ್ರದೇಶಗಳಲ್ಲಿ ಒಳ ನುಸುಳುವುದನ್ನು ನಿಲ್ಲಿಸಿ, ಭದ್ರ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಪಶ್ಚಿಮ ಬಂಗಾಳದ ಜನರಿಗೆ ರಾಜವಂಶದ ರಾಜಕೀಯ ಬೇಕಾ ಅಥವಾ ಅಭಿವೃದ್ಧಿಯ ಆಡಳಿತ ಬೇಕಾ ಎಂಬುವುದನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. 2010ರ ಚುನಾವಣೆಯ ಸಂದರ್ಭದಲ್ಲಿ ತಾಯಿ, ಮಾತೃಭೂಮಿ ಭಾವನಾತ್ಮಕ ಹೇಳಿಕೆ ನೀಡಿ ಗೆದ್ದು ಸರ್ಕಾರ ರಚನೆ ಮಾಡಿದ್ದ ಮಮತಾ ಬ್ಯಾನರ್ಜಿ ರಾಜವಂಶದ ಆಡಳಿತವನ್ನು ನೀಡಿದ್ದಾರೆ. ಆಗ ಜನರಿಗೆ ಸರ್ಕಾರದ ಮೇಲೆ ಭರವಸೆ ಮತ್ತು ಆಸೆ ಹೊಂದಿದ್ದ ಜನರಲ್ಲಿ ಈಗ ಕೋಪವಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಕೇಂದ್ರದ ಕಲ್ಯಾಣ ಯೋಜನೆಗಳಾದ ಪಿಎಂ ಕಿಸಾನ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳನ್ನು ಜಾರಿ ಮಾಡದೇ ನಿರ್ಬಂಧ ವಿಧಿಸಿದೆ. ದೇಶದ ರೈತರಿಗೆ ನೀಡಲಾಗುತ್ತಿರುವ 6 ಸಾವಿರ ರೂ.ಗಳನ್ನು ಇಲ್ಲಿ ಒಬ್ಬ ರೈತ ಕೂಡ ಪಡೆಯಲು ಅವಕಾಶ ನೀಡಿಲ್ಲ. ಆದರೆ ಪ್ರತಿ ವರ್ಷ ನಮಗೆ ಹಣ ಕೇಳಿ ಪತ್ರ ಬರುತ್ತದೆ. ಬಂಗಾಳದಲ್ಲಿ ಮೂರು ರೀತಿಯ ಕಾನೂನುಗಳಿದ್ದು, ಬ್ಯಾನರ್ಜಿ ಅವರ ಸೋದರಳಿಯ, ಸಂಸದರಿಗೆ ಒಂದು ಕಾನೂನು, ವೋಟ್ ಬ್ಯಾಂಕ್‍ಗಳಿಗೆ ಒಂದು ಕಾನೂನು ಹಾಗೂ ಸಾಮಾನ್ಯ ಜನರಿಗೆ ಒಂದು ಕಾನೂನು ಜಾರಿಯಲ್ಲಿದೆ. ಇಂತಹ ಆಡಳಿತವನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಅಮಿತ್ ಶಾ ಕಿಡಿಕಾರಿದರು.

Click to comment

Leave a Reply

Your email address will not be published. Required fields are marked *

www.publictv.in