Saturday, 25th January 2020

ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

ಬೆಂಗಳೂರು: ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರಕ್ಕೆ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಬೆಳಗ್ಗೆಯಿಂದಲೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸಂಜೆ ನಡೆದ ಸಭೆಯಲ್ಲಿಯೂ ಶಾಸಕರು, ಸಂಸದರು, ಪರಿಷತ್ ಸದಸ್ಯರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಭೆಯ ಆರಂಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕರುಗಳಿಗೆ ಮೊದಲಿಗೆ ಎಲ್ಲರ ಬಳಿ ಪೆನ್ನು, ನೋಟ್ ಪ್ಯಾಡ್ ಕಡ್ಡಾಯವಾಗಿ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಪೆನ್ನು ಮತ್ತು ಪ್ಯಾಡ್ ಇಲ್ಲದವರಿಗೆ ನೋಟ್ ಪ್ಯಾಡ್, ಪೆನ್ನು ಕೊಡಿಸಿದ್ದಾರೆ. ನಾನು ಹೇಳೋದನ್ನ ಗಮನವಿಟ್ಟು ಕೇಳಿಸಿಕೊಳ್ಳಿ ಮತ್ತು ಬರೆದಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಕಟ್ಟು ನಿಟ್ಟಿನ ಪಾಠ ಮಾಡಿದ್ದಾರೆ.

ಮತಗಳ ಕ್ರೋಢೀಕರಣ: ಉತ್ತರ ಪ್ರದೇಶ ಚುನಾವಣೆ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ನಡೆಸುವ ವಿಷಯ ಪ್ರಸ್ತಾಪಿಸಲಾಗಿದೆ. ಹಿಂದೂ ಮತಗಳ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಬೇಕು. ಚುನಾವಣೆ ಸಂದರ್ಭದಲ್ಲಿ ತಾವೇ ಕರ್ನಾಟಕಕ್ಕೂ ಬಂದು ಚುನಾವಣಾ ತಂತ್ರಗಾರಿಕೆ ರೂಪಿಸುತ್ತೇವೆ. ಟಿಕೆಟ್ ಹಂಚಿಕೆಯನ್ನೂ ಜವಾಬ್ದಾರಿಯನ್ನು ಹೈಕಮಾಂಡ್ ನಿರ್ವಹಿಸುತ್ತದೆ ಎಂದು ರಾಜ್ಯ ನಾಯಕರಿಗೆ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ತುಮ್ಹಾರಾ ಖಾನಾ ತುಮ್ ಖಾವೊಗೆ: ಗೋವಾ ಹಾಗೂ ಕರ್ನಾಟಕ ಶಾಸಕರು ಗಾಳಿ ಮೇಲೆ ತೇಲಾಡುತ್ತಿದ್ದೀರಿ. ಅದನ್ನ ಬಿಟ್ಟು ಕೆಳಗೆ ಬಂದು ಜನರೊಂದಿಗೆ ಬೆರೆಯಿರಿ. ಇಲ್ಲವಾದ್ರೆ ನಿಮ್ಮ ಊಟವನ್ನು ನೀವೇ ತಿನ್ನಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ

ಲಿಂಗಾಯತ-ವೀರಶೈವ, ಬ್ರಾಹ್ಮಣ ವಿಚಾರ ಮಾಡುವುದು ಬೇಡ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರೊಂದಿಗೆ ಬೆರೆತು ಅವರ ಬೆಂಬಲ ಪಡೆಯಿರಿ ಎಂದು ತಿಳಿಹೇಳಿದರು. ಕರ್ನಾಟಕ ಚುನಾವಣೆಗೆ ಸಂಪೂರ್ಣ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪಕ್ಷದ ಅನತಿಯಂತಯೆ ನಡೆದುಕೊಳ್ಳಬೇಕು ಅಂತಾ ಖಡಕ್ ಸೂಚನೆ ಕೊಟ್ಟರು.

ಉತ್ತರ ಪ್ರದೇಶದಲ್ಲಿ ಹೈಕಮಾಂಡ್ ಸಿದ್ಧಪಡಿಸಿದ್ದ ಯೋಜನೆಯಂತೆ ಬಿಜೆಪಿ ಚುನಾವಣೆ ಮಾಡಿದೆ. ಮತದಾನದ ಕೊನೆ ದಿನ ರಾತ್ರಿ ಪ್ರಧಾನಿ ಮೋದೀಜಿಗೆ ನಾನು ಕರೆ ಮಾಡಿ ನಾವು 300 ಸೀಟ್ ಪಡೆಯುತ್ತೇವೆ ಅಂತಾ ತಿಳಿಸಿದ್ದೆ, ಹಾಗೆಯೇ ಗೆಲವನ್ನು ಪಡೆದುಕೊಂಡಿದ್ದೇವೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ನಾವು ಹೇಳಿದಂತೆ ಮಾಡಲಿಲ್ಲ. ಹಾಗಾಗಿ ಅಲ್ಲಿ ವ್ಯತಿರಿಕ್ತ ಫಲಿತಾಂಶ ಬಂತು. ಸಭೆಯಲ್ಲಿ ಸುಮಾರು ಒಂದೂವರೆ ಗಂಟೆವರೆಗೂ ಅಮಿತ್ ಶಾ ಮಾತನಾಡಿದರು.

ttps://www.youtube.com/watch?v=Qs0I-pv9D4U

Leave a Reply

Your email address will not be published. Required fields are marked *