Connect with us

Latest

ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಎಲ್ಲಿ ಲಾಕ್‌ಡೌನ್‌, 144 ಸೆಕ್ಷನ್‌ ಜಾರಿಯಾಗಿದೆ?

Published

on

ನವದೆಹಲಿ: ಕೋವಿಡ್‌ 19 ನಿಯಂತ್ರಿಸಲು 1-2 ದಿನ ಲಾಕ್‌ಡೌನ್‌ ಮಾಡಲು ಸಾಧ್ಯವೇ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರರಣಗಳಿರುವ 7 ರಾಜ್ಯಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಕೇಳಿದ್ದಾರೆ.

ನರೇಂದ್ರ ಮೋದಿಯವರು ಬುಧವಾರ ಕೋವಿಡ್‌ 19 ಹೆಚ್ಚು ಸೋಂಕು ಇರುವ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ನವದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಟ್ಟು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಿ ಸಲಹೆ ಕೇಳಿದ್ದಾರೆ.

ಒಂದು ಅಥವಾ 2 ದಿನ ಲಾಕ್ ಡೌನ್ ಮಾಡಿದ್ರೆ ಹೇಗೆ? ಪರಿಣಾಮಕಾರಿಯಾಗುತ್ತಾ ಈ ಬಗ್ಗೆ ಸರ್ಕಾರಗಳು ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಧಾನಿಯವರೇ ಪ್ರಸ್ತಾಪ ಮಾಡಿದ ಕಾರಣ ಮತ್ತೆ ಲಾಕ್‌ಡೌನ್‌ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಆದರೆ ಈಗಾಗಲೇ ಕೆಲ ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಮತ್ತು 144 ಸೆಕ್ಷನ್‌ ಜಾರಿ ಮಾಡಿದೆ.

ಲಾಕ್‌ಡೌನ್‌ ಎಲ್ಲಿ?
ಛತ್ತೀಸ್‌ಘಡದಲ್ಲಿರುವ ಕಾಂಗ್ರೆಸ್‌ ಸರ್ಕಾರ ಸೆ.22 ರಿಂದ ಕೊರೊನಾ ಪ್ರಕರಣ ಹೆಚ್ಚಿರುವ ರಾಜಧಾನಿ ರಾಯ್‌ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಿದೆ. ಜಶ್‌ಪುರ, ಬಲೋದಾ ಬಜಾರ್, ಜಂಜಗೀರ್-ಚಂಪಾ, ದುರ್ಗ್, ಭೈಲೈ, ಧಮ್ತಾರಿ, ಬಿಲಾಸ್ಪುರ್ ಸೆಪ್ಟೆಂಬರ್ 28 ರವರೆಗೆ ಲಾಕ್‌ಡೌನ್‌ ಘೋಷಣೆಯಾಗಿದೆ.

144 ಸೆಕ್ಷನ್‌ ಎಲ್ಲಿ?
ರಾಜಸ್ಥಾನ: ಜೈಪುರ, ಜೋಧ್‌ಪುರ, ಕೋಟಾ, ಅಜ್ಮೀರ್, ಅಲ್ವಾರ್, ಭಿಲ್ವಾರಾ, ಬಿಕಾನೆರ್, ಉದಯಪುರ, ಸಿಕಾರ್, ಪಾಲಿ ಮತ್ತು ನಾಗೌರ್ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರ: ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಈಗಾಗಲೇ ಸೆ.30ರವರೆಗೆ ರಾಜಧಾನಿ ಮುಂಬೈಯಲ್ಲಿ 144 ಸೆಕ್ಷನ್‌ ಜಾರಿ ಮಾಡಿದೆ.

ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ನೋಯ್ಡಾ (ಗೌತಮ್ ಬುದ್ಧ ನಗರ ಜಿಲ್ಲೆ) ದಲ್ಲಿ ಸೆಕ್ಷನ್ 144 ಹೇರಿದೆ.

ಒಡಿಶಾ: ಗಂಜಾಂ ಜಿಲ್ಲೆಯ ಬೆರ್ಹಾಂಪುರದಲ್ಲಿ ಸೆಕ್ಷನ್‌ 144 ಜಾರಿಯಾಗಿದೆ. ಇಲ್ಲಿ ಕಲುವಾ ದೇವಿಯ 46 ದಿನಗಳ ಉತ್ಸವ ಸೆಪ್ಟೆಂಬರ್ 16 ರಂದು ಪ್ರಾರಂಭವಾಗಿ ಅಕ್ಟೋಬರ್ 31 ರವರೆಗೆ ನಡೆಯಲಿದೆ. ಹೀಗಾಗಿ ಮುಂದಿನ ಆದೇಶದವರೆಗೂ ಇಲ್ಲಿ 144 ಸೆಕ್ಷನ್‌ ಜಾರಿಯಾಗಿದೆ.

Click to comment

Leave a Reply

Your email address will not be published. Required fields are marked *