Connect with us

ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಡಾನ್ಸ್

ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಡಾನ್ಸ್

ಡೆಹ್ರಾಡೂನ್: ಅಂಬುಲೆನ್ಸ್ ಡ್ರೈವರ್ ಒಬ್ಬರು ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಸಖತ್ ಡ್ಯಾನ್ಸ್ ಮಾಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಉತ್ತರಾಖಂಡ ರಾಜ್ಯದ ಹಲ್ದ್ವಾನಿಯ ತಿವಾರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ಮದುವೆ ಮೆರವಣಿಗೆ ಹೊರಟಿತ್ತು. ಆಗ ಅಂಬುಲೆನ್ಸ್ ನಿಂದ ಕೆಳಗಿಳಿದ ಚಾಲಕ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ  ಅಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇರಲಿಲ್ಲ ಎಂದು ತಿಳಿದುಬಂದಿದೆ.

ಈ ಮದುವೆ ಮೆರವಣಿಗೆಯಲ್ಲಿ ಕೊರೊನಾ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಅಲ್ಲದೆ ಕಡಿಮೆ ಮಂದಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆ ಮೆರವಣಿಗೆಯಲ್ಲಿ ಅಂಬುಲೆನ್ಸ್ ಚಾಲಕನ ನೃತ್ಯ ಎಲ್ಲರ ಗಮನ ಸೆಳೆದಿದೆ.

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನ ವಾರಿಯರ್ಸ್‍ಗಳಾದ ನರ್ಸ್, ಡಾಕ್ಟರ್, ಅಂಬುಲೆನ್ಸ್ ಡ್ರೈವರ್, ಇತರ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ

Advertisement
Advertisement