Thursday, 16th August 2018

Recent News

ಬೆಂಗ್ಳೂರಲ್ಲಿ ಮಹಾಮೈತ್ರಿಯ ಸುಳಿವು ನೀಡಿ ಉಲ್ಟಾ ಹೊಡೆದ ಮಾಯಾವತಿ!

ಲಕ್ನೋ: ಎಚ್‍ಡಿ ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮೈತ್ರಿಕೂಟದ ಸುಳಿವು ನೀಡಿದ್ದ ಬಿಎಸ್‍ಪಿ ನಾಯಕಿ ಈಗ ಷರತ್ತು ವಿಧಿಸಿ ಉಲ್ಟಾ ಹೊಡೆದಿದ್ದಾರೆ. ಬಿಎಸ್‍ಪಿ ಗೆ ಸೂಕ್ತ ಸ್ಥಾನಮಾನಗಳನ್ನು ಕೊಟ್ಟಲ್ಲಿ ಮಾತ್ರ ಬಿಜೆಪಿ ವಿರೋಧಿ ಬಣದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಒಂದು ವೇಳೆ ಗೌರವಯುತ ಸ್ಥಾನಗಳನ್ನು ಕೊಡದಿದ್ದಲ್ಲಿ ರಾಜ್ಯಗಳಲ್ಲಿ ಏಕಾಂಗಿಯಾಗಿ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಬಹಳಷ್ಟು ಪಕ್ಷಗಳ ಜೊತೆ ಮೈತ್ರಿಯ ಮಾತುಕತೆ ನಡೆದಿದೆ. ಕಾರ್ಯಕರ್ತರು ನಡೆಯುತ್ತಿರುವ ಬೆಳವಣಿಗೆಗಳಿಗೆ ತಯಾರಿರಬೇಕು. ಮೈತ್ರಿ ಮಾತುಕತೆಗಳು ನಡೆಯುತ್ತಿದ್ದರೂ ಕಾರ್ಯಕರ್ತರು ಪಕ್ಷದ ನಿಲುವಿಗೆ ಬದ್ಧರಾಗಿರಬೇಕು ಎಂದು ಹೇಳಿದರು.

ವಿರೋಧ ಪಕ್ಷ ಎಸ್‍ಪಿ ಜೊತೆಗಿನ ಮೈತ್ರಿ ಕುರಿತು ಮಾತನಾಡಿದ ಅವರು ದೇಶದ ಹಿತ ದೃಷ್ಟಿಯಿಂದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ ಎಂದು ಹೇಳಿದರು.

ಈ ವೇಳೆ 20 ವರ್ಷ ಕಾಲ ತಾವೇ ಬಿಎಸ್‍ಪಿ ಅಧ್ಯಕ್ಷೆಯಾಗಿ ಮುಂದುವರಿಯುತ್ತೇನೆ ಘೋಷಿಸಿಕೊಂಡ ಮಾಯಾವತಿ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ. ಈ ವೇಳೆ ತಮ್ಮನಾಗಿರುವ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷನಾಗಿ ಮುಂದುವರಿಯಲು ಅವಕಾಶ ನಿರಾಕರಿಸಲಾಗಿದೆ. ಆನಂದ್ ಕುಮಾರ್ ನನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕಾರ್ಯಕರ್ತನಾಗಿ ಕೆಲಸ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *