Connect with us

Districts

ಗುರುವಾರದಿಂದ ಅಲೈಯನ್ಸ್ ಏರ್ ವಿಮಾನಯಾನ ಸಂಚಾರ ಪುನರಾರಂಭ

Published

on

ಕಲಬುರಗಿ: ಲಾಕ್‍ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಗುರುವಾರ ಅಲೈಯನ್ಸ್ ಏರ್ ಸಂಸ್ಥೆಯೂ ಬೆಂಗಳೂರು-ಕಲಬುರಗಿ ನಡುವೆ ವಾಣಿಜ್ಯ ವಿಮಾನ ಸಂಚಾರ ಪುನರಾರಂಭಿಸಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಣಾನೇಶ್ವರ ರಾವ್ ತಿಳಿಸಿದ್ದಾರೆ.

ಅಲೈಯನ್ಸ್ ಏರ್ ಸಂಸ್ಥೆಯ ವಿಮಾನವು ಮೇ 28, 30 ಹಾಗೂ 31 ರಂದು ಬೆಳಗ್ಗೆ 11:45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿ ಮಧ್ಯಾಹ್ನ 12:25 ಗಂಟೆಗೆ ಬೆಂಗಳೂರಿಗೆ ಮರು ಪ್ರಯಾಣ ಬೆಳಸಲಿದೆ.

ಜೂನ್ 1ರಿಂದ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲೈಯನ್ಸ್ ಏರ್ ಸಂಸ್ಥೆಯ ವಿಮಾನವು ಜೂನ್ 1ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8:45 ಗಂಟೆಗೆ ಆಗಮಿಸಿ 9:25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ಭಾನುವಾರದ ವರೆಗೆ ಬೆಳಗ್ಗೆ 11:45 ಗಂಟೆಗೆ ಆಗಮಿಸಿ 12:25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಣಾನೇಶ್ವರ ರಾವ್ ತಿಳಿಸಿದರು.