Saturday, 25th May 2019

Recent News

4 ರನ್‍ಗೆ ಆಲೌಟ್ – ಶೂನ್ಯ ಸುತ್ತಿದ ತಂಡದ 11 ಆಟಗಾರ್ತಿಯರು

ಕೊಚ್ಚಿ: ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ಕಾಸರಗೋಡು ಮಹಿಳಾ ಅಂಡರ್ 19 ತಂಡ ಕೇವಲ 4 ರನ್ ಗಳಿಗೆ ಆಲೌಟ್ ಆಗಿದೆ. ವಿಶೇಷವೆಂದರೆ ಎಲ್ಲಾ ಆಟಗಾರ್ತಿಯರು ಪಂದ್ಯದಲ್ಲಿ ಶೂನ್ಯ ರನ್ ಹೊಡೆದಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‍ಮಣ್ಣ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಯನಾಡು ಹಾಗೂ ಕಾಸರಗೋಡು ಅಂಡರ್ ತಂಡಗಳು ಮುಖಾಮುಖಿ ಆಗಿದ್ದವು. ಆದರೆ ಪಂದ್ಯದಲ್ಲಿ ಕಾಸರಗೋಡು ತಂಡ ಕೆಟ್ಟ ಪ್ರದರ್ಶನವನ್ನು ತೋರಿದ್ದು, ತಂಡದ ಯಾವುದೇ ಆಟಗಾರ್ತಿ ಸಿಂಗಲ್ ಡಿಜಿಟ್ ನಂಬರ್ ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ.

ಇನ್ನಿಂಗ್ಸ್ ಅಂತ್ಯದ ವೇಳೆಗೆ ಕಾಸರಗೋಡು ತಂಡದ ಆಟಗಾರ್ತಿಯರ ಸ್ಕೋರ್ ಕಾರ್ಡ್ 0,0,0,0,0,0,0,0,0,0,0 ಕಾಸರಗೋಡು ತಂಡದ ಪರ ಅಂತಿಮ ಆಟಗಾರ್ತಿ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದಿದ್ದರು. ವಿಶೇಷವೆಂದರೆ ತಂಡದ ಎಲ್ಲಾ ಆಟಗಾರ್ತಿಯರು ಕೂಡ ಬೌಲ್ಡ್ ಆಗುವ ಮೂಲಕ ಔಟಾಗಿದ್ದರು. ಇತರೇ ರೂಪದಲ್ಲಿ 4 ರನ್ ಬಂದಿದ್ದ ಕಾರಣ ಗೆಲ್ಲಲು 5 ರನ್ ಗುರಿ ಪಡೆದ ವಯನಾಡು ತಂಡ ಒಂದು ಓವರಿನಲ್ಲಿ ಗುರಿ ತಲುಪಿ 10 ವಿಕೆಟ್ ಗಳ ಜಯ ಪಡೆಯಿತು.

ಕಾಸರಗೋಡು ತಂಡ ನಾಯಕಿ ಎಸ್. ಅಕ್ಷತಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದರು. ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೆ.ವೀಕ್ಷತ ಹಾಗೂ ಎಸ್.ಚೈತ್ರ ಮೊದಲ 2 ಓವರಿನಲ್ಲಿ ಒಂದು ರನ್ ಕೂಡ ಗಳಿಸಲು ವಿಫಲರಾಗಿದ್ದರು. ವಯನಾಡು ತಂಡದ ನಾಯಕಿ ನಿತ್ಯಾ 3ನೇ ಓವರಿನಲ್ಲಿ 3 ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡಿದ್ದರು.

Leave a Reply

Your email address will not be published. Required fields are marked *