ಬಾಲಿವುಡ್ನ ಮುದ್ದಾದ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾದ ಎರಡೇ ತಿಂಗಳಿಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಆಲಿಯಾ ತಾಯಿಯಾಗುತ್ತಿರುವ ವಿಚಾರ ತಿಳಿದ್ದರು. ಈ ಬೆನ್ನಲ್ಲೇ ಮತ್ತೊಂದು ಅಧಿಕೃತ ಘೋಷಣೆಯನ್ನ ಆಲಿಯಾ ಮಾಡಿದ್ದಾರೆ.
ಇತ್ತೀಚೆಗೆ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಹಸೆಮಣೆ ಏರಿದ್ದರು. ಸದ್ಯ ತಾಯತ್ತನದ ಖುಷಿಯಲ್ಲಿರುವ ಆಲಿಯಾ ಇದೀಗ ತಮ್ಮ ಬಯಕೆಯನ್ನ ತಿಳಿಸಿದ್ದಾರೆ. ಹೊಸ ಅತಿಥಿಯ ಆಗಮನದ ಬೆನ್ನಲ್ಲೇ ಶೀಘ್ರದಲ್ಲಿ ತಾವು ಆಲಿಯಾ ಕಪೂರ್ ಆಗುವುದಾಗಿ ತಿಳಿಸಿದ್ದಾರೆ.
ಮದುವೆಯ ನಂತರ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಆಲಿಯಾ, ತಮ್ಮ ಸರ್ನೇಮ್ ಅನ್ನು ಬದಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ದಾಖಲೆಗಳಿಗೆ ಆಲಿಯಾ ಕಪೂರ್ ಎಂದು ಬದಲಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಪತಿ ಹೆಸರಿನ ಕಪೂರ್ ಎಂದಿದೆ ನನ್ನ ಹೆಸರಿನ ಪಕ್ಕ ಕೂಡ ಕಪೂರ್ ಎಂದಿರಬೇಕು ಎಂದು ತಮ್ಮ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ
ಆದರೆ ಚಿತ್ರರಂಗದಲ್ಲಿ ಆಲಿಯಾ ಭಟ್ ಆಗಿ ಮುಂದೆವರೆಯುವುದಾಗಿ ತಿಳಿಸಿದ್ದಾರೆ. ಕೆಲ ದಾಖಲೆಗಳಲ್ಲಿ ಮಾತ್ರ ಆಲಿಯಾ ಕಪೂರ್ ಇರಲಿದೆ ಎಂದು ತಿಳಿಸಿದ್ದಾರೆ.