Connect with us

Crime

ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ

Published

on

Share this

ಧಾರವಾಡ: ಕುಡಿದ ಮತ್ತಿನಲ್ಲಿ ಪತಿ ಪತ್ನಿಯ ಮೂಗು ಕತ್ತರಿಸಿ ಪರಾರಿ ಆಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಉಮೇಶ್ ತನ್ನ ಪತ್ನಿ ಗೀತಾ ಮೂಗು ಕತ್ತರಿಸಿದ್ದು, ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 5 ವರ್ಷಗಳ ಹಿಂದೆ ಉಮೇಶ್ ತನ್ನ ಪತ್ನಿಯನ್ನು ಬಿಟ್ಟು ಎಲ್ಲೋ ಹೋಗಿದ್ದ. ಈ ಹಿನ್ನೆಲೆ ಗೀತಾ ಅಮ್ಮಿನಬಾವಿ ಗ್ರಾಮದ ತನ್ನ ತಾಯಿಯ ಮನೆಯಲ್ಲಿ ಬಂದು ವಾಸವಾಗಿದ್ದಳು.  ಇದನ್ನೂ ಓದಿ: ಘಮ ಘಮಿಸುವ ಪಾಲಕ್ ಚಿಕನ್ ಕರಿ ನೀವೂ ಮಾಡಿ

ಆದರೆ, 5 ತಿಂಗಳ ಹಿಂದೆ ಗೀತಾ ತಾಯಿ ಮನೆಗೆ ಬಂದ ಉಮೇಶ ಬಂದಿದ್ದನು. ಪತಿ ಜೊತೆ ಅಮ್ಮಿನಬಾವಿ ಗ್ರಾಮದಲ್ಲಿ ವಾಸವಾಗಿದ್ದಳು. ಕಟ್ಟಡ ಕಾಮಗಾರಿ ಮಾಡುವ ಉಮೇಶ್, ಪ್ರತಿ ದಿನ ಮದ್ಯ ಕುಡಿಯಲು ಹಣಕ್ಕಾಗಿ ಕಿರಿಕಿರಿ ಮಾಡುತ್ತಲೇ ಬಂದಿದ್ದ. ಕಳೆದ ರಾತ್ರಿ ಕೂಡಾ ಕುಡಿಯುವ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾದಾಗ, ಉಮೇಶ್ ಬಾಯಿಯಿಂದ ಕಚ್ಚಿ ಗೀತಾ ಮೂಗನ್ನ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಗೀತಾಳಿಗೆ ತಕ್ಷಣ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಗೆ ಗೀತಾ ತಾಯಿ ದೂರನ್ನ ಕೂಡಾ ನೀಡಿದ್ದು, ಉಮೇಶಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement