ಲೈಂಗಿಕ ಕಿರುಕುಳದ ವಿರುದ್ಧ `ಮಿಟೂ’ ಚಳುವಳಿಗೆ ಐಶ್ವರ್ಯಾ ರೈ ಬೆಂಬಲ

ಮುಂಬೈ: ಸಮಾಜದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರ ವಿರುದ್ಧ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು `ಮಿಟೂ’ ಚಳುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದರ ಜೊತೆ ಮಾತನಾಡಿದ ಐಶ್ವರ್ಯಾ, “ಸಿಡ್ನಿಯಲ್ಲಿ `ಮಿಟೂ’ ಚಳುವಳಿಯ ಬಗ್ಗೆ ಮಾತುಕತೆ ನಡೆದಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿದ್ದು, ಈ ವಿಚಾರವನ್ನು `ಮಿಟೂ’ ನಲ್ಲಿ ಹಂಚಿಕೊಂಡರೆ ಬಗೆಹರಿಸಲು ಸಾಧ್ಯವಾಗುತ್ತದೆ ಅಂತ ತೀರ್ಮಾನಕ್ಕೆ ಬರಲಾಗಿದೆ. ತುಂಬಾ ಚರ್ಚೆ ಮಾಡಿದ ಬಳಿಕ ಈ ಚಳುವಳಿಯನ್ನು ಪ್ರಾರಂಭಿಸಲಾಗಿದೆ. ಒಂದು ಒಳ್ಳೆ ವಿಷಯ ಎಂದರೆ ಈ ಕುರಿತು ಜನರು ಕೂಡ ಮಾತನಾಡುತ್ತಿದ್ದಾರೆ. ಇದು ವಿಶ್ವಕ್ಕೆ ಸೇರಿದ್ದು, ಇದನ್ನು ಸೀಮಿತವಾಗಿಸುವುದಿಲ್ಲ. ಈ ಚಳುವಳಿಯು ಸಕಾರಾತ್ಮವಾಗಿದೆ ಎಂದು ಹೇಳಿದರು.

ಅಷ್ಟೇ ಅಲ್ಲದೇ ಮಹಿಳೆ ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತಾನೇ ಬಂದು ಮಾತನಾಡಿದರೆ ಒಳ್ಳೆಯದು. ಆಕೆ ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಹೇಳಿಕೊಂಡರೆ ಅದು ಖುಷಿಯ ವಿಷಯವಾಗಿದೆ. ಇದು ಯಾವುದೇ ವ್ಯವಹಾರ ಅಥವಾ ಚಲನಚಿತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ರೀತಿಯಲ್ಲೂ ಮಹಿಳೆಯರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೇಳಿಕೊಳ್ಳಲು ಇಲ್ಲಿ ಮುಕ್ತ ಅವಕಾಶವಿದೆ ಅಂತ ಅವರು ವಿವರಿಸಿದ್ದಾರೆ.

ಹಾಲಿವುಡ್‍ನ ಪ್ರಸಿದ್ಧ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಲೈಂಗಿಕ ದೌರ್ಜನ್ಯದ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ವರ್ಷ ಹಾಲಿವುಡ್ ಮಿಟೂ ಚಳುವಳಿ ಕಿಕ್ ಸ್ಟಾರ್ಟರ್ ಅನ್ನು ಬೆಂಬಲಿಸಿತು. ಜಗತ್ತಿನಾದ್ಯಂತ ಜನರೊಂದಿಗೆ ಇಂತಹ ಪ್ರಕರಣಗಳ ಉಗಮದ ಕುರಿತು ಜಾಗೃತಿ ಮೂಡಿಸಲು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಶ್ ಟ್ಯಾಗ್ ಅನ್ನು ಬಳಸಲಾಗಿತ್ತು.

Leave a Reply

Your email address will not be published. Required fields are marked *