Connect with us

Latest

ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಸಿಬ್ಬಂದಿಯಿಂದ ಸ್ಟ್ರೈಕ್

Published

on

ಮುಂಬೈ: ದೀಪಾವಳಿ ಬೋನಸ್ ನೀಡದ್ದಕ್ಕೆ ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸಸ್ ಲಿಮಿಟಿಡ್‍ನ (ಎಐಎಟಿಎಸ್‍ಎಲ್) 400 ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ.

ಬುಧವಾರ ರಾತ್ರಿ ಪ್ರಾರಂಭವಾಗಿದ್ದು ಇಂದು ಕೂಡ ಮುಂದುವರಿದಿತ್ತು. ಏರ್ ಇಂಡಿಯಾ ಸಿಬ್ಬಂದಿ ಏರ್‍ಪೋರ್ಟ್‍ನಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲನೆ, ಬ್ಯಾಗ್‍ಗಳನ್ನು ಲೋಡ್ ಹಾಗೂ ಅನ್‍ಲೋಡ್ ಮಾಡುವುದು, ವಿಮಾನ ಹಾಗೂ ಕಾರ್ಗೋಗಳನ್ನು ಸ್ವಚ್ಛ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಾರೆ. ಅಲ್ಲದೆ ಕೆಲವು ವಿದೇಶಿ ಏರ್‍ಲೈನ್ಸ್‍ಗಳ ಗುತ್ತಿಗೆಯನ್ನು ನೋಡಿಕೊಳ್ಳುತ್ತಾರೆ.

ಪ್ರತಿಭಟನೆಯಿಂದ ಇಂದು ಎಲ್ಲಾ ಏರ್ ಇಂಡಿಯಾ ವಿವಾನಗಳ ಹಾರಾಟ ವಿಳಂಬವಾಗಿದೆ. ಮುಂಬೈ- ಬ್ಯಾಂಕಾಕ್ ಎಐ330 ವಿಮಾನ ಬೆಳಗ್ಗೆ 8.18ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ 7 ಗಂಟೆ ತಡವಾಗಿ ಹೊರಟಿದೆ. ಹಾಗೆಯೇ ಬೆಳಗಿನ ಜಾವ 1.30ಕ್ಕೆ ಹೊರಡಬೇಕಾದ ಮುಂಬೈ-ನೆವಾರ್ಕ್ ವಿಮಾನ 4.08ಕ್ಕೆ ಹೊರಟಿದೆ ಎಂದು ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಪ್ರತಿಭಟನೆಯಿಂದ ಹಲವು ಏರ್ ಇಂಡಿಯಾ ವಿವಾನಗಳ ನಿರ್ಗಮನ ಹಾಗೂ ಆಗಮನದಲ್ಲಿ ಸರಿಸುಮಾರು 2 ಗಂಟೆ ಕಾಲ ವಿಳಂಬವಾಗಿದೆ. ಒಟ್ಟು 16 ಅಂತರಾಷ್ಟ್ರೀಯ ಮತ್ತು 8 ದೇಶಿಯ ವಿಮಾನ ಹಾರಾಟಕ್ಕೆ ಈ ಪ್ರತಿಭಟನೆಯ ಬಿಸಿ ತಟ್ಟಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv