Connect with us

ಯಡಿಯೂರಪ್ಪ ವೇಗಕ್ಕೆ ವಯಸ್ಸು ಅಡ್ಡಿಯಾಗುತ್ತಿಲ್ಲ: ಶಾಸಕ ರಘುಪತಿ ಭಟ್

ಯಡಿಯೂರಪ್ಪ ವೇಗಕ್ಕೆ ವಯಸ್ಸು ಅಡ್ಡಿಯಾಗುತ್ತಿಲ್ಲ: ಶಾಸಕ ರಘುಪತಿ ಭಟ್

ಉಡುಪಿ: ವಯಸ್ಸಾದ್ರೂ ಸಿಎಂ ಯಡಿಯೂರಪ್ಪ ಜವಾಬ್ದಾರಿ ನಿರ್ವಹಿಸುವಲ್ಲಿ ಸಮರ್ಥರಿದ್ದಾರೆ. ಆರೋಗ್ಯವಾಗಿ ಇದ್ದವರಿಗೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ ಎಂದು ಉಡುಪಿ ಬಿಜೆಪಿ ಶಾಸಕ, ಸರಕಾರದ ಭರವಸೆಗಳ ಸಮಿತಿ ಅಧ್ಯಕ್ಷ ರಘುಪತಿ ಭಟ್ ಸಿಎಂಗೆ ಬೆಂಬಲವಾಗಿ ನಿಂತಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಶಾಸಕರ ಸಭೆ ನಡೆಸುತ್ತಾರೆ. ಜಿಲ್ಲಾ ಪ್ರವಾಸವನ್ನು ಮಾಡುತ್ತಿದ್ದಾರೆ. ಯಡಿಯೂರಪ್ಪ ಪರ- ವಿರೋಧ ಸಹಿಸಂಗ್ರಹ ಮಾಡಬಾರದು ಎಂಬ ಸೂಚನೆ ಬಂದಿದೆ. ನನ್ನ ಬಳಿ ಯಾರು ಸಹಿ ಕೇಳಿಲ್ಲ, ನಾನು ಸಹಿ ಹಾಕುವುದಿಲ್ಲ. ಪಕ್ಷದಲ್ಲಿ ಸಹಿಸಂಗ್ರಹ ಆಗಬಾರದು ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ರಾಜಾಹುಲಿ ಮನತುಂಬಿದ ನಗುವಿನ ಹಿಂದೆ ಅವರು..!

ಶಾಸಕರನ್ನು ಕರೆದು ಅಭಿಪ್ರಾಯ ಕೇಳಲು ಅವಕಾಶ ಇದೆ, ಕೇಳಬಹುದು. ರಾಜ್ಯದಲ್ಲೇ ಯಾರೋ ಕೂತು ಸಹಿ ಸಂಗ್ರಹ ಮಾಡುವುದು ಸರಿಯಲ್ಲ. ಹೈಕಮಾಂಡ್ ಬೇಕಿದ್ದರೆ ಈ ಕೆಲಸ ಮಾಡಬಹುದು. ಸಿಎಂ ಬದಲಾಗುವ ಅನಿವಾರ್ಯತ ಇಲ್ಲ. ಸಿಎಂ ಬದಲಾವಣೆ ವಿಚಾರ ಎಲ್ಲಿಂದ ಸೃಷ್ಟಿಯಾಗಿದೆಯೋ ಗೊತ್ತಿಲ್ಲ. ಸಿಎಂ ಬದಲಾವಣೆ ಆಗಬೇಕಾದ ಅನಿವಾರ್ಯತೆ ನನಗೆ ಕಂಡುಬರುತ್ತಿಲ್ಲ. ಹೈಕಮಾಂಡ್‍ನ ವರಿಷ್ಠರ ಬಂದು ಶಾಸಕರ ಅಭಿಪ್ರಾಯ ಕೇಳಬಹುದು ಎಂದು ಹೇಳಿದರು.

ರಾಜನಾಥಸಿಂಗ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅವರೇ ಬಂದು ಅಂದು ಅಭಿಪ್ರಾಯ ಕೇಳಿದ್ದರು. ಪ್ರತಿಯೊಬ್ಬರ ಶಾಸಕರ ವನ್ ಟು ವನ್ ಅಭಿಪ್ರಾಯ ಕೇಳಿದ್ದರು. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ಕೆಲಸ ಮಾಡಬಹುದು. ನಾವೇ ಸಂಗ್ರಹಿಸುವುದು ಒಳ್ಳೆಯ ಸಂಪ್ರದಾಯ ಅಲ್ಲ ಎಂದಿದ್ದಾರೆ.

Advertisement
Advertisement