Bengaluru City

ಸೋಮವಾರ ಮತ್ತೆ ದೆಹಲಿಗೆ ಸಿಎಂ- ಮುಂದಿನ ಬುಧವಾರ ಹೊಸ ಸಂಪುಟ ರಚನೆ ಸಾಧ್ಯತೆ

Published

on

Share this

– ಮೊದಲ ಹಂತದಲ್ಲಿ 20 ರಿಂದ 25 ಶಾಸಕರಿಗೆ ಚಾನ್ಸ್

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಮೊದಲ ದೆಹಲಿ ಯಾತ್ರೆ ಮುಗಿಸಿದ್ದಾರೆ. ಆದರೆ ಈ ಯಾತ್ರೆಗಳು ಸದ್ಯಕ್ಕೆ ಮುಗಿಯುವುದಿಲ್ಲ. ಕಾರಣ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಬೊಮ್ಮಾಯಿ ನೀಡಿದ 18 ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕೇವಲ 6 ಹೆಸರಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಆರು ಹೆಸರುಗಳನ್ನು ಹೈಕಮಾಂಡ್ ತಿಳಿಸಿದೆ. ಹೊಸ ಪಟ್ಟಿಯೊಂದಿಗೆ ಮತ್ತೆ ದೆಹಲಿಗೆ ಬರುವಂತೆ ಬೊಮ್ಮಾಯಿಗೆ ಹೈಕಮಾಂಡ್ ಸೂಚಿಸಿದೆ. ಸೋಮವಾರ ಮತ್ತೊಮ್ಮೆ ಬೊಮ್ಮಾಯಿ ದೆಹಲಿಗೆ ಹೋಗುವ ಸಂಭವ ಇದೆ. ಮುಂದಿನ ಬುಧವಾರ ಸಂಪುಟ ರಚನೆಯಾಗಬಹುದು.

ದೆಹಲಿ ಮೂಲಗಳ ಪ್ರಕಾರ, 2 ಹಂತಗಳಲ್ಲಿ ಸಂಪುಟ ರಚನೆಯಾಗುವ ಸಂಭವ ಇದೆ. ಮೊದಲ ಹಂತದಲ್ಲಿ 20ರಿಂದ 25 ಮಂದಿ ಸಂಪುಟ ಸೇರುವ ಸಾಧ್ಯತೆಗಳಿವೆ. 10ರಿಂದ 12 ಸಚಿವರನ್ನು ಕೈಬಿಡಲಿದ್ದು, ಇದರಲ್ಲಿ ಇಬ್ಬರಿಂದ ಮೂವರು ವಲಸಿಗರು ಇರಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಪಿಎಲ್‍ನಲ್ಲಿ ಆಡದಂತೆ ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ: ಹರ್ಷಲ್ ಗಿಬ್ಸ್ ಆರೋಪ

ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಮುಂದುವರಿದಿದೆ. ಮಾಜಿ ಸಿಎಂ ಯಡಿಯೂರಪ್ಪರನ್ನು ಮುನಿರತ್ನ, ನಿರಾಣಿ, ರೇಣುಕಾಚಾರ್ಯ, ಪ್ರಭು ಚವ್ಹಾಣ್, ರಮೇಶ್ ಜಾರಕಿಹೊಳಿ ಸೇರಿ ಹಲವರು ಭೇಟಿ ಮಾಡಿದ್ರು. ಮುನಿರತ್ನಗೆ ಮಂತ್ರಿ ಸ್ಥಾನದ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಅಂತಾ ತಿಳಿದುಬಂದಿದೆ. ಮತ್ತೊಂದ್ಕಡೆ ಈಶ್ವರಪ್ಪ ಡಿಸಿಎಂ ಆಗಲು ಭಾರೀ ಕಸರತ್ತು ನಡೆಸಿದ್ದಾರೆ.

ಇಂದು ಆರ್‍ಎಸ್‍ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಸಭೆ ನಡೆಸಿದ್ದಾರೆ. ಸ್ಪೀಕರ್ ಕಾಗೇರಿ, 2 ವರ್ಷದ ರಿಪೋರ್ಟ್ ರಿಲೀಸ್ ಮಾಡಿದ್ದಾರೆ. ಯಾಕೆ ಇದು.. ನೀವು ಮಂತ್ರಿ ಆಗ್ತೀರಾ ಎಂಬ ಪ್ರಶ್ನೆಗೆ ರಾಂಗ್ ಅಡ್ರೆಸ್‍ನಲ್ಲಿ ಪ್ರಶ್ನೆ ಮಾಡ್ತಿದ್ದೀರಾ ಎಂದು ಉತ್ತರಿಸಿದ್ದಾರೆ. ಮೂಲ ನಾಯಕರ ಭೇಟಿ ಬಗ್ಗೆ ಕೇಳಿದಾಗ, ಸ್ಪೀಕರ್ ಅಂದ್ಮೇಲೆ ಹಲವರು ಭೇಟಿಗೆ ಬರುತ್ತಾರೆ ಎಂದು ಹೇಳಿದ್ದಾರೆ. ಕ್ಯಾಬಿನೆಟ್ ರಚನೆ ವಿಳಂಬವನ್ನು ಕಾಂಗ್ರೆಸ್ ಟೀಕಿಸಿದೆ.

Click to comment

Leave a Reply

Your email address will not be published. Required fields are marked *

Advertisement
Advertisement