Connect with us

Bengaluru City

ತಂದೆ-ತಾಯಿ ಬಳಿಕ ನಟಿ ಮೇಘನಾ, ಪುತ್ರನಿಗೂ ಕೊರೊನಾ ಪಾಸಿಟಿವ್

Published

on

ಬೆಂಗಳೂರು: ನಟಿ ಮೇಘನಾ ರಾಜ್‍ಗೆ ಮತ್ತೆ ಅಗ್ನಿ ಪರೀಕ್ಷೆ ಎದುರಾಗಿದೆ. ಬದುಕಲ್ಲಿ ಮತ್ತೆ ಹೋರಾಟ ಶುರು ಮಾಡುವ ಪರಿಸ್ಥಿತಿ ಎದುರಾಗಿದೆ. ಕೊರೊನಾ ಮಹಾಮಾರಿ ಮೇಘನಾ ಕುಟುಂಬವನ್ನ ಆವರಿಸಿದೆ. ಮೇಘನಾ ಹಾಗೂ ಮಗುವಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಮೊದಲು ಮೇಘನಾ ತಾಯಿ ಪ್ರಮೀಳಾ ಜೋಷಾಯ್‍ಗೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಸುಂದರ್ ರಾಜ್‍ಗೂ ಪಾಸಿಟಿವ್ ಬಂತು. ಇದೀಗ ಮೇಘನಾ ಮತ್ತು ಮಗುವಿಗೂ ಕೊರೊನಾ ಪಾಸಿಟೀವ್ ವರದಿ ಬಂದಿದೆ ಎಂಬುದನ್ನ ಮೇಘನಾ ತಂದೆ ಸುಂದರ್ ರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಸುಂದರ್ ರಾಜ್ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಘನಾ ಹಾಗೂ ಪುಟ್ಟ ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾರ ಸಂಪರ್ಕ ಹೊಂದದಿದ್ದರೂ ಕೊರೊನಾ ಹೇಗೆ ಬಂತು ಗೊತ್ತಾಗುತ್ತಿಲ್ಲ ಎಂದು ಕುಟುಂಬ ಯೋಚಿಸುತ್ತಿದೆ. ಜೊತೆಗೆ ತಮ್ಮ ಸಂಪರ್ಕದಲ್ಲಿದ್ದವರು ಎಚ್ಚರಿಕೆಯಿಂದಿರಿ ಎಂದು ಸುಂದರ್ ರಾಜ್‍ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪ್ರಮೀಳಾ ಅವರು ಭಾನುವಾರ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢವಾಗಿತ್ತು. ಆದರೆ ಈ ವೇಳೆ ಪತಿ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಸದ್ಯ ಪ್ರಮೀಳಾ ಜೋಷಾಯ್ ಆರೋಗ್ಯವಾಗಿದ್ದು, ವೈದ್ಯರ ಸಲಹೆ ಮೇರೆಗೆ ಐಸೋಲೇಷನ್ ನಲ್ಲಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in