Wednesday, 22nd January 2020

Recent News

ಬೆಂಗಾವಲು ಅಂಬುಲೆನ್ಸ್‌ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಸ್ಮೃತಿ ಇರಾನಿ

– ವೇದಿಕೆ ಮೇಲೆ ಸ್ಮೃತಿ ಇರಾನಿ ಕಾಲು ಹಿಡಿದು ಕುಳಿತ ವೃದ್ಧೆ

ಲಕ್ನೋ: ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯನ್ನು ತಮ್ಮ ಬೆಂಗಾವಲು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಮೇಠಿ ಜನರ ಹೃದಯವನ್ನು ಗೆದ್ದಿದ್ದಾರೆ.

ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಸ್ಮೃತಿ ಇರಾನಿ ಅವರು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಜೊತೆ ಇಂದು ಭೇಟಿ ನೀಡಿದರು. ಈ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಸ್ಮೃತಿ ಇರಾನಿಯವರು ತಮ್ಮ ಬೆಂಗಾವಲು ವಾಹನದಲ್ಲಿ ಕಳಿಸಿಕೊಟ್ಟರು. ಸಚಿವರ ಜನರ ಬಗೆಗಿನ ಕಾಳಜಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅಷ್ಟೇ ಅಲ್ಲದೆ ಕಾರ್ಯಕ್ರಮ ಆರಂಭವಾಗಿದ್ದಾಗ ವೇದಿಕೆಗೆ ಆಗಮಿಸಿದ ವೃದ್ಧೆಯೊಬ್ಬರು ಸಚಿವೆ ಸ್ಮೃತಿ ಇರಾನಿ ಅವರ ಕಾಲು ಹಿಡಿದರು. ಎಷ್ಟೇ ಹೇಳಿದರೂ ವೃದ್ಧೆ ಮಾತ್ರ ನನಗೆ ಪರಿಹಾರ ಕೊಡಿಸಿ ಎಂದು ಕೇಳಿಕೊಂಡಳು. ಸ್ಮೃತಿ ಇರಾನಿ ಅವರು ವಿಚಾರಿಸಿದಾಗ ಸಮಸ್ಯೆ ಬಿಚ್ಚಿಟ್ಟ ವೃದ್ಧೆ, ಕುಟುಂಬದವರು ನನ್ನ ಆಸ್ತಿಯನ್ನು ಕಸಿದುಕೊಂಡಿದ್ದಾರೆ. ನಾನು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಳು.

ವೇದಿಕೆ ಮೇಲೆಯೇ ಇದ್ದ ಅಧಿಕಾರಿಗಳನ್ನು ಕರೆದ ಸ್ಮೃತಿ ಇರಾನಿ ಅವರು ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಶೀಘ್ರವೇ ವೃದ್ಧೆಗೆ ನ್ಯಾಯ ಕೊಡಿಸಬೇಕು ಎಂದು ಸೂಚನೆ ನೀಡಿದರು. ಸಚಿವರ ಕಾರ್ಯಕ್ಕೆ ಕ್ಷೇತ್ರದ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಿಂದೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಆಪ್ತ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದರು. ಈ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *