Tuesday, 15th October 2019

Recent News

ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ನಂತ್ರ ಸುದೀಪ್ ಅವರದ್ದು ಅತ್ಯುತ್ತಮ ಧ್ವನಿ!

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕನ್ನಡದ ಕಿಚ್ಚ ಸುದೀಪ್ ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಹೈಟ್ ಅಂದ್ರೆ ಅಮಿತಾಬ್ ಬಚ್ಚನ್ ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಅಮಿತಾಬ್ ಅವರಂತೆ ಅನೇಕ ನಟರು ಎತ್ತರವಾಗಿದ್ದಾರೆ. ಇವರಲ್ಲಿ ಸುದೀಪ್ ಕೂಡ ಒಬ್ಬರು.

ಅಮಿತಾಬ್ ಅವರ ಕಂಠಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಬಹುಶಃ ಅವರ ರೀತಿಯ ಧ್ವನಿ ಯಾರಿಗೂ ಇಲ್ಲ. ಆದರೆ ಅವರ ನಂತರ ಸುದೀಪ್ ಆ ರೀತಿ ಧ್ವನಿ ಹೊಂದಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಇತ್ತೀಚಿಗಷ್ಟೆ ತಮಿಳು ಅಭಿಮಾನಿಯೊಬ್ಬರು ಸುದೀಪ್ ಸಿನಿಮಾಗಳನ್ನ ನೋಡಲು ಕನ್ನಡ ಕಲಿಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದರು. `ಸರ್ ನಾನು ತಮಿಳುನಾಡಿನವನು. ನನಗೆ ನೀವಂದ್ರೆ ತುಂಬಾ ಇಷ್ಟ. ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ ‘ಈಗ’, ‘ಬಾಹುಬಲಿ’, `ಪುಲಿ’, ‘ರಕ್ತಚರಿತ್ರ’ ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್ ಗೆ ಮನಸೋತಿದ್ದೇನೆ. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು, ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ನೀವು ಕನ್ನಡ ಕಲಿಯಲು ಶ್ರಮ ಪಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ. ತಮಿಳು ಅಭಿಮಾನಿ `ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ನಂತರ ಸುದೀಪ್ ಅವರಿಗೆ ಅತ್ಯುತ್ತಮ ಧ್ವನಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ಕಾಲಿವುಡ್ ನಲ್ಲಿ ನಿಮ್ಮ ಧ್ವನಿ ಕೇಳಲು ನಾನು ಕಾಯುತ್ತಿದ್ದೇನೆ. ದಯವಿಟ್ಟು ನಿಮ್ಮ ನೈಜ ಧ್ವನಿಯಲ್ಲೇ ಸಿನಿಮಾ ಮಾಡಿ. ನಿಮ್ಮ ಅಭಿನಯಕ್ಕೆ ಬೇರೆಯವರು ಧ್ವನಿ ನೀಡಿದರೆ ಅದು ಚೆನ್ನಾಗಿರಲ್ಲ ಎಂದು ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಮತ್ತು ಸುದೀಪ್ ಒಟ್ಟಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ `ರಣ್’ ಚಿತ್ರದಲ್ಲಿ ಇಬ್ಬರು ತೆರೆಹಂಚಿಕೊಂಡಿದ್ದಾರೆ. ಸದ್ಯಕ್ಕೆ `ದಿ ವಿಲನ್’ ಚಿತ್ರದ ಚಿತ್ರೀಕರಣ ಮುಗಿಸಿರುವ ಸುದೀಪ್ ಮುಂದಿನ ತಿಂಗಳಿನಿಂದ ಪೈಲ್ವಾನ್ ಚಿತ್ರವನ್ನ ಆರಂಭಿಸಲಿದ್ದಾರೆ. ಈ ಮಧ್ಯೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಸಿನಿಮಾದಲ್ಲೂ ಕಿಚ್ಚ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *